Select Your Language

Notifications

webdunia
webdunia
webdunia
webdunia

ನಾಳೆ ಕೊಡಗು-ಕರಾವಳಿಗೆ ಸಿಎಂ ಭೇಟಿ

CM to visit Kodagu-Karavali tomorrow
bangalore , ಸೋಮವಾರ, 11 ಜುಲೈ 2022 (21:20 IST)
ರಾಜ್ಯದ ಕೆಲವಡೆ ಕಳೆದ 10 ದಿವಸಗಳಿಂದ ಮಳೆಯಾಗುತ್ತಿದೆ. ಈಗಾಗಲೇ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ನಾಳೆ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಲ್ಲೇ ಸಭೆ ಮಾಡಿ ಪರಿಹಾರಗಳ ಬಗ್ಗೆ ತಿಳಿಸುತ್ತೇನೆ. ಅಲ್ಲಿನ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿ ಅಲ್ಲೇ ಸೂಚನೆಗಳನ್ನು ನೀಡುತ್ತೇನೆ ಎಂದರು.
ನಾಳೆ ಕೊಡಗು ಮತ್ತು ಮಂಗಳೂರಿಗೆ ಭೇಟಿ ಕೊಟ್ಟು, ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಮಾಡುತ್ತೇನೆ. ನಂತರ ಬುಧವಾರ ಕಾರವಾರ ಜಿಲ್ಲೆಗೆ ಭೇಟಿ ಕೊಡುತ್ತೇನೆ ಎಂದು ಸಿಎಂ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

PSI ಹಗರಣದಲ್ಲಿ ‘ಕೈ’ MLA ಪುತ್ರ, ಸೋದರ?