Publish Date: Mon, 01 Oct 2018 (08:36 IST)
Updated Date: Mon, 01 Oct 2018 (08:37 IST)
ಬೆಂಗಳೂರು: ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಜಾಮೀನು ಅರ್ಜಿ ತೀರ್ಪು ಇಂದು ಬರಲಿದೆ.
ಎಸಿಎಂಎಂ ಕೋರ್ಟ್ ನಲ್ಲಿ ಜಾಮೀನು ತಿರಸ್ಕೃತಗೊಂಡಿದ್ದರಿಂದ ವಿಜಯ್ ಮತ್ತು ಸಹಚರರು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಕೈಗೊಂಡಿರುವ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಹೀಗಾಗಿ ವಿಜಯ್ ಇಂದು ಜೈಲಿನಿಂದ ಹೊರ ಬರುತ್ತಾರಾ ಅಥವಾ ಮತ್ತೆ ಬಂಧನದಲ್ಲಿಯೇ ಕಳೆಯಬೇಕಾಗುತ್ತದೋ ಎನ್ನುವುದು ಇಂದು ನಿರ್ಧಾರವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.