Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ದುನಿಯಾ ವಿಜಯ್ ಹೇಗಿರ್ತಾರೆ ಗೊತ್ತಾ?

ಜೈಲಿನಲ್ಲಿ ದುನಿಯಾ ವಿಜಯ್ ಹೇಗಿರ್ತಾರೆ ಗೊತ್ತಾ?
ಬೆಂಗಳೂರು , ಮಂಗಳವಾರ, 25 ಸೆಪ್ಟಂಬರ್ 2018 (10:13 IST)
ಬೆಂಗಳೂರು: ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದುನಿಯಾ ವಿಜಯ್ ದಿನಚರಿ ಹೇಗಿದೆ ಗೊತ್ತಾ?

ಈಗಾಗಲೇ ತಮ್ಮ ಸಹಚರರ ಜತೆ ಎರಡು ದಿನ ಜೈಲಿನಲ್ಲಿ ಕಳೆದ ದುನಿಯಾ ವಿಜಯ್ ಸಾಮಾನ್ಯ ಖೈದಿಗಳ ಸೌಲಭ್ಯವನ್ನೇ ಒದಗಿಸಲಾಗಿದೆ. ನಿನ್ನೆ ದುನಿಯಾ ವಿಜಯ್ ಸ್ನೇಹಿತರು, ಎರಡನೇ ಪತ್ನಿ ಕೀರ್ತಿ ಜೈಲಿಗೆ ಬಂದು ಭೇಟಿ ಮಾಡಿ ಹೋಗಿದ್ದರು.

ಇಂದು ಬೆಳಿಗ್ಗೆ ಜೈಲಿನಲ್ಲಿ ಇತರ ಸಿಬ್ಬಂದಿಗೆ ನೀಡುವಂತೆ ವಿಜಯ್ ಗೂ ಬೆಳಗಿನ ಉಪಾಹಾರ ನೀಡಲಾಗಿದೆ. ಚಿತ್ರಾನ್ನ ಸೇವಿಸಿ, ತಮ್ಮ ಸ್ನೇಹಿತರು ತಂದಿದ್ದ ಹಣ್ಣು ಹಂಪಲು ಸೇವಿಸಿ ತಮ್ಮ ದಿನಪತ್ರಿಕೆ ಓದುತ್ತಾ ವಿಜಯ್ ಕಾಲ ಕಳೆಯುತ್ತಿದ್ದಾರೆ. ನಾಳೆ ವಿಜಯ್ ಪ್ರಕರಣದ ವಿಚಾರಣೆ ನಡೆಯಲಿದ್ದು, ಜೈಲು ಮುಂದುವರಿಯುತ್ತಾ, ಬಿಡುಗಡೆಯ ಭಾಗ್ಯ ದೊರಕುತ್ತಾ ಕಾದು ನೋಡಬೇಕಿದೆ.

ಇನ್ನು ವಿಜಯ್ ರಿಂದ ಹಲ್ಲೆಗೊಳಗಾಗಿರುವ ಮಾರುತಿ ಗೌಡ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮಾರುತಿ ಗೌಡ ಕೇವಲ ದ್ರವಾಹಾರ ಮಾತ್ರ ಸೇವಿಸುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಪಾಕಿಸ್ತಾನ ಮ್ಯಾಚ್ ನೆನಪಿಸಿ ಟಾಂಗ್ ಕೊಟ್ಟ ಸಿಟಿ ರವಿ