Publish Date: Tue, 25 Sep 2018 (08:24 IST)
Updated Date: Tue, 25 Sep 2018 (08:26 IST)
ಬೆಂಗಳೂರು : ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋಮವಾರದಂದು ಚರ್ಚೆ ನಡೆಸಿದೆ.
ಪಾನಿಪುರಿ ಕಿಟ್ಟಿ ವಿಜಿ ಅವರು ನಟ ದುನಿಯಾ ವಿಜಯ್ ಅವರನ್ನ ಸಿನಿಮಾರಂಗದಿಂದ ನಿಷೇಧ ಮಾಡುವಂತೆ ಒತ್ತಾಯ ಮಾಡಿ ಫಿಲ್ಮ್ ಚೇಂಬರ್ ಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ''ವಿಜಿ ಅವರನ್ನ ಚಿತ್ರರಂಗದಿಂದ ಬಹಿಷ್ಕಾರ ಮಾಡಲು ಸಾಧ್ಯವಿಲ್ಲ'' ಎಂದಿದ್ದಾರೆ.
“ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದು ಅವರ ವೈಯಕ್ತಿಕ ವಿಚಾರ ಆಗಿರುವುದರಿಂದ ಚಿತ್ರರಂಗದಿಂದ ಬಹಿಷ್ಕಾರ ಸಾಧ್ಯವಿಲ್ಲ'' ಎಂದು ಚಿನ್ನೇಗೌಡ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.