Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ಅಭಿಮಾನಿಗಳಿಂದ ಪ್ರತಿಭಟನೆ

ದುನಿಯಾ ವಿಜಯ್ ಅಭಿಮಾನಿಗಳಿಂದ ಪ್ರತಿಭಟನೆ
ದಾವಣಗೆರೆ , ಶನಿವಾರ, 29 ಸೆಪ್ಟಂಬರ್ 2018 (17:33 IST)
ನಟ ದುನಿಯಾ ವಿಜಯ್ ಮೇಲಿನ ಹಲ್ಲೆ ಪ್ರಕರಣ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಜಿಲ್ಲಾ ಕುರುಬರ ಸಂಘ, ದುನಿಯಾ ವಿಜಯ್ ಅಭಿಮಾನಿಗಳ ಸಂಘದಿಂದ ನಟ ದುನಿಯಾ ವಿಜಯ್ ಮೇಲಿನ ಹಲ್ಲೆ ಘಟನೆ ಖಂಡಿಸಲಾಯಿತು.

ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ರಾಜನಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಯಿತು. ದುನಿಯಾ ವಿಜಯ್ ವಿರುದ್ಧ ಉದ್ದೇಶಪೂರ್ವಕ ಪ್ರಕರಣ ದಾಖಲಿಸಲಾಗಿದೆ. ನಟ ವಿಜಯ್ ತೇಜೋವಧೆ ಮಾಡಲು ಈ ಕುತಂತ್ರ ಮಾಡಲಾಗಿದೆ ಎಂದು ಆರೋಪಿಸಿ ಎಸಿ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯಪ್ಪ ಸ್ವಾಮಿ ದೇಗುಲ ಮಹಿಳೆಯರಿಗೆ ಪ್ರವೇಶ: ಆಶಾದಾಯಕ ಬೆಳವಣಿಗೆ ಎಂದ ಖರ್ಗೆ