Select Your Language

Notifications

webdunia
webdunia
webdunia
webdunia

ಅಮಾನ್ಯಗೊಂಡ ನೋಟುಗಳು ಏನಾಗುತ್ತಿವೆ ಗೊತ್ತಾ? ದೇಶವೇ ಬೆಚ್ಚಿ ಬೀಳಿಸುವ ವರದಿಯಿದು!

ಅಮಾನ್ಯಗೊಂಡ ನೋಟುಗಳು ಏನಾಗುತ್ತಿವೆ ಗೊತ್ತಾ? ದೇಶವೇ ಬೆಚ್ಚಿ ಬೀಳಿಸುವ ವರದಿಯಿದು!
ನವದೆಹಲಿ , ಶನಿವಾರ, 9 ಜೂನ್ 2018 (09:24 IST)
ನವದೆಹಲಿ: ನಮ್ಮ ದೇಶದಲ್ಲಿ ಅಮಾನ್ಯಗೊಂಡಿರುವ 500, 1000 ರೂ. ಮುಖಬೆಲೆಯ ನೋಟುಗಳು ಏನಾಗುತ್ತಿವೆ ಗೊತ್ತಾ? ಅದರ ಬಗ್ಗೆ ಎಲ್ಲರೂ ಬೆಚ್ಚಿಬೀಳಿಸುವ ಅಂಶವೊಂದನ್ನು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ.

ನಮ್ಮಲ್ಲಿ ಅಮಾನ್ಯಗೊಂಡ ನೋಟುಗಳು ಭೂಗತ ದೊರೆ ದಾವೂದ್ ಬಂಟರ ಮೂಲಕ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಖರೀದಿಸುತ್ತಿದೆಯಂತೆ. ಬಳಿಕ ನಕಲಿ ನೋಟು ನಿರ್ಮಿಸಲು ಬಳಸಿಕೊಳ್ಳುತ್ತಿದೆ ಎಂದು ಖಾಸಗಿ ವಾಹಿನಿಯೊಂದು ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ವರದಿ ಮಾಡಿದೆ.

ನೇಪಾಳ ಮಾರ್ಗವಾಗಿ ಅಮಾನ್ಯಗೊಂಡಿರು ವ 500, 1000 ರೂ. ನೋಟುಗಳನ್ನು ದಾವೂದ್ ಬಂಟರು ಪಾಕ್ ಗೆ ವರ್ಗಾಯಿಸುತ್ತಿದ್ದಾರೆ. ಬಳಿಕ ಆ ನೋಟುಗಳಲ್ಲಿರುವ ಭದ್ರತಾ ಅಂಶಗಳನ್ನು ತೆಗೆದು ನಕಲಿ ನೋಟುಗಳನ್ನು ಮಾಡುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಕೇಶ್ ಅಂಬಾನಿ ಪಡೆಯುವ ವೇತನ ಎಷ್ಟು ಗೊತ್ತಾ?