Publish Date: Tue, 13 Feb 2018 (17:03 IST)
Updated Date: Tue, 13 Feb 2018 (17:06 IST)
ನವದೆಹಲಿ: ದೇಶದಲ್ಲಿ ಪ್ರಧಾನಿ ಮೋದಿ ಸರ್ಕಾರ ನೋಟು ಅಮಾನ್ಯಗೊಳಿಸುವ ನಿರ್ಧಾರ ಕೈಗೊಳ್ಳಲು ಆರ್ ಬಿಐ ಅಥವಾ ಹಣಕಾಸು ಸಚಿವ ಅರುನ್ ಜೇಟ್ಲಿ ಸಲಹೆ ಕಾರಣವಾಗಿರಲಿಲ್ಲ. ಇದೆಲ್ಲಾ ಆರ್ ಎಸ್ಎಸ್ ನ ಐಡಿಯಾವಾಗಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಆರೋಪಿಸಿದ್ದಾರೆ.
ಬೀದರ್ ನಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ. ನೋಟು ನಿಷೇಧಕ್ಕೆ ಆರ್ ಎಸ್ಎಸ್ ಕುಮ್ಮಕ್ಕು ಕಾರಣವಾಗಿತ್ತು ಎಂದಿದ್ದಾರೆ.
‘ದೇಶದ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ತನ್ನ ಪ್ರಭಾವ ಬೀರಲು ಆರ್ ಎಸ್ಎಸ್ ಹೊಂಚು ಹಾಕುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿಗೆ ನೋಟು ನಿಷೇಧಿಸಲು ಕುಮ್ಮಕ್ಕು ನೀಡಿತ್ತು’ ಎಂದು ರಾಹುಲ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ