Publish Date: Wed, 27 Dec 2017 (10:11 IST)
Updated Date: Wed, 27 Dec 2017 (10:12 IST)
ಮುಂಬೈ: ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿ ಸದ್ಯಕ್ಕೆ ತಿಹಾರ್ ಜೈಲಿನಲ್ಲಿರುವ ಭೂಗತ ಪಾತಕಿ ಛೋಟಾ ಶಕೀಲ್ ನ್ನು ಹತ್ಯೆ ಮಾಡಲು ಭೂಗತ ದೊರೆ ದಾವೂದ್ ಇಬ್ರಾಹಿಂ ಸಂಚು ನಡೆಸಿದ್ದಾನೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ದಾವೂದ್ ಇಬ್ರಾಹಿಂ ಬಗ್ಗೆ ಛೋಟಾ ಶಕೀಲ್ ಹಲವು ರಹಸ್ಯಗಳನ್ನು ಬಿಟ್ಟುಕೊಟ್ಟಿದ್ದ. ಈ ಹಿನ್ನಲೆಯಲ್ಲಿ ತನಗೆ ಕುತ್ತು ಬರಬಹುದೆಂಬ ಭಯಕ್ಕೆ ದಾವೂದ್, ಶಕೀಲ್ ನನ್ನು ಜೈಲಿನಲ್ಲೇ ಮುಗಿಸಲು ಸಂಚು ರೂಪಿಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಹಾರ್ ಜೈಲು ಅಧಿಕಾರಿಗಳಿಗೆ ಮುನ್ನಚ್ಚರಿಕೆ ನೀಡಿದ್ದಾರೆ.
ದೆಹಲಿ ಮೂಲದ ಪಾತಕಿಯ ಮೂಲಕ ಈ ಕೆಲಸ ಮಾಡಿಸಲು ದಾವೂದ್ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ತಿಹಾರ್ ಜೈಲಿನಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಪಾತಕಿಗಳು ಜೈಲಿನೊಳಗೆ ಬಂದು ಕೊಲೆ ನಡೆಸಲು ಸಾಧ್ಯವಿಲ್ಲ ಎಂದು ತಿಹಾರ್ ಜೈಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ