Publish Date: Wed, 20 Dec 2017 (16:39 IST)
Updated Date: Wed, 20 Dec 2017 (16:51 IST)
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ, ಬಲಗೈ ಬಂಟ ಛೋಟಾ ಶಕೀಲ್ ನನ್ನು ಹತ್ಯೆಗೈಯಲಾಗಿದೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಇವರಿಬ್ಬರೂ ಬೇರೆಯಾಗಿದ್ದರೂ ಎಂಬ ಸುದ್ದಿ ಕೂಡ ಬಂದಿತ್ತು.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಶಕೀಲ್ ಜನವರಿ 6ರಂದು ಇಸ್ಲಾಮಾಬಾದ್ ನಲ್ಲಿ ನಡೆದ ಮಾಫಿಯಾ ಸಂಘಟನೆಗಳ ಸಭೆಗೆ ಹಾಜರಾಗಿದ್ದ. ಈ ಸಂದರ್ಭದಲ್ಲಿ ಆತನಿಗೆ ಹೃದಯಾಘಾತವಾಗಿತ್ತು. ಆತನ ಬಾಡಿಗಾರ್ಡ್ ರಾವಲ್ಪಿಂಡಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದರು. ಆದರೆ ದಾರಿಮಧ್ಯೆಯೇ ಶಕೀಲ್ ಕೊನೆಯುಸಿರೆಳೆದಿದ್ದ ಎಂದು ತಿಳಿಸಿದೆ. ಮತ್ತೊಂದು ವರದಿ ಪ್ರಕಾರ, ಪಾಕಿಸ್ತಾನದ ಐಎಸ್ಐ ಶಕೀಲ್ ನನ್ನು ಮಾಫಿಯಾವನ್ನೇ ಬಳಸಿ ಹತ್ಯೆಗೈದಿದೆ ಎಂದು ಹೇಳಿದೆ.
ಶಕೀಲ್ ಹತ್ಯೆ ಕುರಿತು ಪಾತಕಿ ದಾವೂದ್ ಗೆ ತಿಳಿಸಲಾಗಿತ್ತಂತೆ. ಈ ಸುದ್ದಿ ಕೇಳಿ ದಾವೂದ್ ತುಂಬಾ ಆಘಾತಕ್ಕೊಳಗಾಗಿ ಆತನನ್ನೂ ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ