Select Your Language

Notifications

webdunia
webdunia
webdunia
webdunia

ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ

ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ
ಬೆಂಗಳೂರು , ಸೋಮವಾರ, 20 ಜೂನ್ 2022 (09:00 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸಕ್ಕೆ 3 ದಿನಗಳು ಬಾಕಿ ಇರುವಂತೆ ಪೊಲೀಸ್ ಇಲಾಖೆಯ ಆದೇಶವೊಂದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಜೊತೆಗೆ ಮೈಸೂರಿನ ಮೋದಿ ಕಾರ್ಯಕ್ರಮಕ್ಕೆ ಎರಡು ಡೋಸ್ ಸರ್ಟಿಫಿಕೇಟ್ ಸಾಕು. ಬೆಂಗಳೂರಿನ ಮೋದಿ ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ರೂಲ್ಸ್ ಗೊಂದಲ ಸೃಷ್ಟಿಸಿದೆ.

ಮೋದಿ ರಾಜ್ಯ ಪ್ರವಾಸ ಕೋವಿಡ್ ಪರೀಕ್ಷೆಯ ಗೊಂದಲ ತಂದಿಟ್ಟಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು, ಬಿಜೆಪಿ ಮುಖಂಡರು, ಸಾರ್ವಜನಿಕರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂಬ ಗೊಂದಲ ಉಂಟಾಗಿದೆ.

ಪೊಲೀಸ್ ಇಲಾಖೆ ಪ್ರಧಾನಿ ಕಾರ್ಯಕ್ರಮದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ಆದೇಶ ಮಾಡಿದೆ. ಅದೇ ಆದೇಶವನ್ನೂ ಮಾಧ್ಯಮದವರು ಪಾಲಿಸಬೇಕೆಂದು ವಾರ್ತಾ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

10 ರೂ. ಕಾಯಿನ್ ಗಳನ್ನೇ ಸಂಗ್ರಹಿಸಿ 6 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ!