Publish Date: Mon, 20 Jun 2022 (08:50 IST)
Updated Date: Mon, 20 Jun 2022 (09:18 IST)
ಚೆನ್ನೈ: ಕೆಲವರು 10 ರೂ. ಕಾಯಿನ್ ಕೊಟ್ಟರೆ ಅದನ್ನು ನಿರಾಕರಿಸುವುದು ನೋಡಿದ್ದೇವೆ. 10 ರೂ. ಕಾಯಿನ್ ನಿಷೇಧವಾಗದೇ ಇದ್ದರೂ ಜನರು ಈ ಕಾಯಿನ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ.
ಇದೇ ರೀತಿ ತಮಿಳುನಾಡಿನ ವೆಟ್ರಿವೇಲ್ ಎಂಬಾತ ಅಂಗಡಿ ಇಟ್ಟುಕೊಂಡಿದ್ದ. ಅಂಗಡಿಗೆ ಬರುತ್ತಿದ್ದ ಗ್ರಾಹಕರು 10 ರೂ. ಕಾಯಿನ್ ನೀಡಿದರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬೇಸತ್ತ ಆತ 10 ರೂ. ಕಾಯಿನ್ ಗಳನ್ನೇ ಸಂಗ್ರಹಿಸಿ 6 ಲಕ್ಷ ರೂ. ಮೊತ್ತ ಮಾಡಿ ಕಾರು ಖರೀದಿಸಿದ್ದಾನೆ.
ಮೊದಲು ಶೋ ರೂಂನವರು ಈತ 10 ರೂ.ಗಳ ಮೂಟೆ ಹೊತ್ತು ಕಾರು ಖರೀದಿಸಲು ಬಂದಾಗ ಹಿಂದೇಟು ಹಾಕಿದರಂತೆ. ಆದರೆ ಆತ ನಿಜವಾದ ಕಾರಣ ತಿಳಿಸಿದಾಗ ನಿಜಕ್ಕೂ ಮೆಚ್ಚಿಕೊಂಡ ಶೋ ರೂಂನವರು ಕಾಯಿನ್ ಪಡೆದು ಕಾರು ನೀಡಿದ್ದಾರೆ.