Select Your Language

Notifications

webdunia
webdunia
webdunia
webdunia

ಕಾರಿನ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ!

ಕಾರಿನ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ!
ವಾಷಿಂಗ್ಟನ್ , ಬುಧವಾರ, 15 ಜೂನ್ 2022 (13:21 IST)
ವಾಷಿಂಗ್ಟನ್ : ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವುದು, ಕಾರಿನಲ್ಲಿ ಸುತ್ತುವುದು ಎಲ್ಲ ಮನುಷ್ಯರಿಗೂ ಇರುವ ಸಾಮಾನ್ಯ ಆಸೆ.
 
ಆದರೆ ಇಲ್ಲೊಬ್ಬ ವ್ಯಕ್ತಿ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು. ಇದಕ್ಕಿಂತ ಮೊದಲು ನಾನು ನಿಜವಾದ ಪ್ರೀತಿಯನ್ನು ಅನುಭವಿಸಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಯುಎಸ್ ಅರ್ಕಾನಸ್ ಮೂಲದ ನಥಾನಿಯಲ್ ವ್ಯಕ್ತಿ ಕಾರಿನ ಜೊತೆ ಸಂಬಂಧ ಹೊಂದಿದ್ದಾನೆ. ಕಾರಿನ ದಾಸನಾಗಿರುವ ನಥಾನಿಯಲ್ ಅದರ ಜೊತೆಯೇ ಸಂಸಾರದ ಸುಖವನ್ನು ಅನುಭವಿಸುತ್ತಿದ್ದಾನೆ. ಏನಿದು ಇದು ನಿಜನಾ ಎಂದು ಹುಬ್ಬೇರಿಸುತ್ತೀರಾ. ಹೌದು ಇದು ನಿಜ. 

‘ಮೈ ಸ್ಟ್ರೇಂಜ್ ಅಡಿಕ್ಷನ್’ ಟಿಎಲ್ಸಿ ಡಾಕ್ಯುಮೆಂಟರಿ ಸರಣಿಯ ಆಬ್ಬೆಕ್ಟೋಫಿಲಿಯಾ ಎಪಿಸೋಡ್ನಲ್ಲಿ ಈ ವಿಷಯವನ್ನು ಪ್ರಸಾರ ಮಾಡಲಾಗಿತ್ತು.

ಇದರಲ್ಲಿ ನಥಾನಿಯಲ್ ತನ್ನ ಕಾರಿನ ಜೊತೆ ರೊಮ್ಯಾಂಟಕ್ ಸಂಬಂಧ ಹೊಂದಿರುವುದು ಪ್ರಸಾರವಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದೆ.

ಆಬ್ಬೆಕ್ಟೋಫಿಲಿಯಾ ಎಂದರೆ ಇದರರ್ಥ ಜನರಿಗೆ ಯಾವ ವಸ್ತು ಜೊತೆ ಹೆಚ್ಚು ಭಾವನೆ ಹೊಂದಿರುತ್ತಾರೆ ಅಥವಾ ಲೈಂಗಿಕ ಸಂಬಂಧ ಹೊಂದಿರುವುದೇ ಆಗಿದೆ. ಅದೇ ರೀತಿ ನಥಾನಿಯಲ್ ಕೂಡ ತನ್ನ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಭಾಗ. ಅನೇಕ ಜನರು ಈ ಗೀಳನ್ನು ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಥಾನಿಯಲ್, 2005ರಲ್ಲಿ ಚೇಸ್ನನ್ನು(ಕಾರು) ಡೀಲರ್ ಬಳಿ ನೋಡಿದ ಮೇಲೆ ನೋಡಿದಾಗ ಮೊದಲ ನೋಟದಲ್ಲೇ ಪ್ರೀತಿಯಾಯಿತು. ಬಳಿಕ ಅದನ್ನು ಖರೀದಿಸಿ ಬಳಸಲು ಆರಂಭಿಸಿದ ಸ್ವಲ್ಪದಿನಗಳಲ್ಲಿ ಪ್ರೀತಿ ಹೆಚ್ಚಾಗಿ ರೊಮ್ಯಾಂಟಿಕ್ ಸಂಬಂಧಕ್ಕೆ ತಿರುಗಿತು.

ಕೆಲವೊಮ್ಮೆ ದೈಹಿಕ ಸಂಬಂಧ ಸಹ ನಮ್ಮಿಬ್ಬರ ನಡುವೆ ಇರಲಿದೆ. ನಾನು ನನ್ನ ಕಾರಿನ ಜೊತೆ ಗಾಢವಾದ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿದರು.   

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಣಿ ಪರೀಕ್ಷೆಗೆಂದು ಕರೆಸಿ ಬಲವಂತದ ಮದುವೆ!