ವಾಷಿಂಗ್ಟನ್ : ಸ್ಪೇಸ್ಎಕ್ಸ್ ಕಂಪನಿಯ ಸಿಇಒ ಎಲೋನ್ ಮಸ್ಕ್ ಒಂದು ಹೊಸ ಹೇಳಿಕೆಯನ್ನು ನೀಡುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಮುಂದೆ ನಡೆಯಬಹುದಾದ ಭವಿಷ್ಯದ ಸುಳಿವು ನೀಡಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ಮಾನವನೂ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬಹುದು ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.
ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬೇಕೆಂಬ ಕನಸು ಹಲವು ವಿಜ್ಞಾನಿಗಳದ್ದು.
ಇದೀಗ ವಿಶ್ವದ ಅತ್ಯಂತ ಶ್ರೀಮಂತನ ಹೇಳಿಕೆಯಿಂದಾಗಿ ವಿಶ್ವವ್ಯಾಪಿ ಜನರು ಮುಂದೆ ನಡೆಯಬಹುದಾದ ಭವಿಷ್ಯವನ್ನು ನೋಡಲು ಕಾತುರರಾಗಿದ್ದಾರೆ. ಸ್ಪೇಸ್ಎಕ್ಸ್ನ ಸ್ಟಾರ್ಶಿಪ್ ರಾಕೆಟ್ಗಳಲ್ಲಿನ ಬೆಳವಣಿಗೆಯ ಆಧಾರಗಳ ಮೇಲೆ ಎಲೋನ್ ಮಸ್ಕ್ ಈ ಸುಳಿವನ್ನು ನೀಡಿದ್ದು, ಕಂಪನಿಯ ಪ್ರಯತ್ನ ಎಷ್ಟೊಂದು ಗಂಭೀರವಾದುದು ಎಂಬುದನ್ನು ತಿಳಿಸುತ್ತದೆ.