Select Your Language

Notifications

webdunia
webdunia
webdunia
webdunia

ಸಮಾಧಿ ಮಾಡಲು ಹೋಗಿ ತಾನೇ ಸತ್ತ! ಮುಂದೇನಾಯ್ತು?

ಸಮಾಧಿ ಮಾಡಲು ಹೋಗಿ ತಾನೇ ಸತ್ತ! ಮುಂದೇನಾಯ್ತು?
ವಾಷಿಂಗ್ಟನ್ , ಗುರುವಾರ, 12 ಮೇ 2022 (11:29 IST)
ವಾಷಿಂಗ್ಟನ್  : ಮಹಿಳೆಯ ಕತ್ತು ಹಿಸುಕಿ 60ರ ವೃದ್ಧ ಕೊಂದಿದ್ದಾನೆ. ಆಕೆಯನ್ನು ಸಮಾಧಿ ಮಾಡಲು ಹೋಗಿ 60ರ ವೃದ್ಧನೂ ಸಾವನ್ನಪ್ಪಿರುವ ವಿಲಕ್ಷಣ ಘಟನೆ ಯುಎಸ್ನಲ್ಲಿ ನಡೆದಿದೆ.
 
ದಕ್ಷಿಣ ಕೆರೊಲಿನಾದ ತನ್ನ ಮನೆಯ ಹಿಂಭಾಗದಲ್ಲಿ ಮಹಿಳೆಯನ್ನು 60 ವರ್ಷದ ವೃದ್ಧ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ಮಹಿಳೆಯನ್ನು ಸಮಾಧಿ ಮಾಡುವಾಗ ವೃದ್ಧನಿಗೆ ಕಾರ್ಡಿಯಾಕ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದಾನೆ. 

ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, 60 ವರ್ಷದ ಜೋಸೆಫ್ ಮೆಕಿನ್ನನ್ ಮೃತಪಟ್ಟಿದ್ದಾರೆ. ಮೆಕಿನ್ನನ್ಗೆ ಯಾವುದೇ ರೀತಿಯ ಆಘಾತದ ಲಕ್ಷಣಗಳಿರಲಿಲ್ಲ. ಆದರೆ ನೈಸರ್ಗಿಕ ಕಾರಣಗಳಿಂದ ಈ ಸಾವು ಸಂಭವಿಸಿದೆ. ಈ ಕುರಿತು ಜೋಸೆಫ್ ಸಂಬಂಧಿಕರಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.

ಮೆಕಿನ್ನನ್ ಮನೆಯನ್ನು ಶೋಧಿಸುತ್ತಿರುವ ವೇಳೆ ಸಮಾಧಿಯೊಂದು ಸಿಕ್ಕಿದ್ದು, ಪಕ್ಕದಲ್ಲಿ 65 ವರ್ಷದ ವೃದ್ಧೆ ಮೃತದೇಹ ಪತ್ತೆಯಾಗಿದೆ. ಮೃತದೇಹದ ಬಗ್ಗೆ ತನಿಖೆ ಮಾಡಿದಾಗ ಆಕೆ ಪೆಟ್ರೀಷಿಯಾ ರುತ್ ಡೆಂಟ್ ಎಂದು ತಿಳಿಸಿದುಬಂದಿದೆ ಎಂದು ವಿವರಿಸಿದರು.

 ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಪೆಟ್ರೀಷಿಯಾ ರುತ್ ಡೆಂಟ್ ಸಹಜ ಸಾವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಈ ಕುರಿತು ಪರಿಶೀಲಿಸಿದಾಗ ಮೆಕಿನ್ನನ್ ಅವರು ಪೆಟ್ರೀಷಿಯಾ ರುತ್ ಡೆಂಟ್ ಮೇಲೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತಾಂತರ ನಿಷೇಧ ಕಾಯ್ದೆ ಜಾರಿ!