Publish Date: Sat, 22 Sep 2018 (08:51 IST)
Updated Date: Sat, 22 Sep 2018 (08:53 IST)
ನವದೆಹಲಿ: ಪ್ರಧಾನಿ ಮೋದಿ ದೆಹಲಿಯ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಏನು ಪ್ರಧಾನಿ ಮೋದಿಯವರೇ.. ಪೆಟ್ರೋಲ್ ಬೆಲೆ ದುಬಾರಿ ಎನಿಸಿತಾ? ಅದಕ್ಕೇ ಮೆಟ್ರೋ ಗತಿ ಎಂದು ರೈಲು ಏರಿದಿರಾ? ಎಂದು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.
ದೆಹಲಿಯ ಜನ ನಿಬಿಡ ರಸ್ತೆಯೊಂದರಲ್ಲಿ ಮೋದಿ ವಾಹನ ತೆರಳಬೇಕಿತ್ತು. ಆದರೆ ಭದ್ರತೆ ನೆಪದಲ್ಲಿ ಹಲವರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮೋದಿ ಮೆಟ್ರೋ ಮೂಲಕ ಸಂಚರಿಸಿದರು. ಆದರೆ ಮೋದಿ ನಡೆಗೆ ಟಾಂಗ್ ಕೊಟ್ಟಿರುವ ಕರ್ನಾಟಕ ಕಾಂಗ್ರೆಸ್ ಈ ರೀತಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.