Publish Date: Fri, 21 Sep 2018 (18:48 IST)
Updated Date: Fri, 21 Sep 2018 (18:52 IST)
ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಆಯಾ ಪಕ್ಷಗಳ ಶಾಸಕರನ್ನು ಸೆಳೆಯಲು ರೆಸಾರ್ಟ ರಾಜಕಾರಣಕ್ಕೆ ಸಿದ್ಧತೆ ನಡೆಸಿದ್ದ ಬಿಜೆಪಿ ಇದೀಗ ತನ್ನ ನಿರ್ಧಾರದಿಂದ ಯು ಟರ್ನ ಹೊಡೆದಿದೆ ಎನ್ನಲಾಗಿದೆ.
ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆದುಕೊಂಡು ರೆಸಾರ್ಟಗೆ ಕಳಿಸಲು ಸಿದ್ಧತೆ ನಡೆಸಿದ್ದ ಬಿಜೆಪಿ ತನ್ನ ನಿರ್ಧಾರದಿಂದ ಈಗ ಹಿಂದಕ್ಕೆ ಸರಿದಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿದೆ.
ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಬಿಜೆಪಿ ಮುಂದಾಗಿದೆ ಎಂದು ಸಿಎಂ ದೂರಿರುವ ಬೆನ್ನಲ್ಲೇ ಬಿಜೆಪಿ ಆಪರೇಷನ್ ಕಮಲಕ್ಕೆ ಸಿದ್ಧತೆ ಸದ್ದಿಲ್ಲದೇ ನಡೆಸಿತ್ತು.
ಸಚಿವ ಸಂಪುಟದಲ್ಲಿ ಬಿಜೆಪಿಯ ಕಾರ್ಯತಂತ್ರ ಕುರಿತು ಚರ್ಚೆ ನಡೆದು ತಕ್ಕ ಉತ್ತರ ನೀಡಲು ನಿರ್ಧರಿಸಿದ ಬೆನ್ನಲ್ಲೆ ಬಿಜೆಪಿ ತನ್ನ ನಿರ್ಧಾರದಿಂದ ಕೊಂಚ ಹಿಂದೆ ಸರಿದಿದೆ. ತಾತ್ಕಾಲಿಕ ವಿರಾಮವನ್ನು ಬಿಜೆಪಿ ನಾಯಕರು ಹಾಕಿದ್ದಾರೆ.