Select Your Language

Notifications

webdunia
webdunia
webdunia
webdunia

ಆಪರೇಷನ್ ಕಮಲ: ಸೊಗಡು ಹೇಳಿದ್ದೇನು ಗೊತ್ತಾ?

ಆಪರೇಷನ್ ಕಮಲ: ಸೊಗಡು ಹೇಳಿದ್ದೇನು ಗೊತ್ತಾ?
ತುಮಕೂರು , ಶುಕ್ರವಾರ, 21 ಸೆಪ್ಟಂಬರ್ 2018 (19:27 IST)
ರಾಜ್ಯದಲ್ಲಿರುವ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿಯ ಕ್ರಮಕ್ಕೆ ಮಾಜಿ ಸಚಿವ ಸೊಗಡ ಶಿವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ.

ಸ್ವಪಕ್ಷದವರ ವಿರುದ್ಧವೇ ಮಾಜಿ ಸಚಿವ ಹಾಗೂ ಮುಖಂಡ ತಿರುಗಿ ಬಿದ್ದಿದ್ದಾರೆ. ಆಪರೇಷನ್ ಕಮಲಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಆಪರೇಷನ ಕಮಲವೇ ಅಂತಿಮವಾಗಿದ್ದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಮತದಿಂದ ಸೋಲು ಕಾಣುತ್ತಿರಲಿಲ್ಲ. ಅವರು ಎಂದು ನೀತಿ ಬಿಟ್ಟ ರಾಜಕಾರಣ ಮಾಡಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ನೀತಿಗೆಟ್ಟಿವೆ. ರಾಜ್ಯದಲ್ಲಿ ನೀತಿಗೆಟ್ಟ ರಾಜಕಾರಣ ಮಾಡುವ ಮೂಲಕ ಸಮಾಜ ಹಾಳು ಮಾಡಲಾಗುತ್ತಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಮ್ಮಿಶ್ರ ಸರಕಾರ ಉರುಳೋದಿಲ್ಲ ಎಂದ ಸಚಿವ