Publish Date: Fri, 21 Sep 2018 (19:13 IST)
Updated Date: Fri, 21 Sep 2018 (19:15 IST)
ರಾಜ್ಯ ಸರಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಉರುಳುವುದಿಲ್ಲ ಎಂದು ತೋಟಗಾರಿಕೆ ಸಚಿವ ಹೇಳಿದ್ದಾರೆ.
ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹಾವೇರಿಯಲ್ಲಿ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ಸರಕಾರ ಸುಭದ್ರವಾಗಿದ್ದು, ಉರುಳುವುದಿಲ್ಲ ಎಂದು ಹೇಳಿದ್ದಾರೆ.
ಐದು ವರ್ಷ ಸಂಪೂರ್ಣವಾಗಿ ಸರಕಾರ ಆಡಳಿತ ನಡೆಸುತ್ತದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷ ಬಹುಮತ ಪಡೆದು ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬರಲಿದೆ ಎಂದರು.
ಜಾರಕಿಹೊಳಿ ಸಹೋದರರು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುತ್ತಾರೆ ಎಂಬುದು ಸುಳ್ಳು. ಸುಳ್ಳು ವದಂತಿಗಳಿಗೆ ಬೆಲೆ ಕೊಡುವುದು ಬೇಡ ಎಂದರು.