Select Your Language

Notifications

webdunia
webdunia
webdunia
Sunday, 13 April 2025
webdunia

ಕಾಂಗ್ರೇಸ್ ನವರು ಮೂರು ಬಿಟ್ಟವರು: ಶ್ರೀ ರಾಮುಲು

ಕಾಂಗ್ರೆಸ್
ಬೆಂಗಳೂರು , ಸೋಮವಾರ, 30 ಏಪ್ರಿಲ್ 2018 (13:00 IST)
ಕಾಂಗ್ರೇಸ್ ನವರು ಮೂರು ಬಿಟ್ಟವರು ಎಂದು ಕೊಪ್ಪಳದ ಹನುಮನಾಳದಲ್ಲಿ ಬಿ.ಶ್ರೀರಾಮುಲು ಹೇಳಿದ್ದಾರೆ. ಎಲ್ಲಾ ದೇವರ ಆಣೆ ಮಾಡಿ ಅಭಿವೃದ್ಧಿ ಬಗ್ಗೆ ಮಾತನಾಡ್ತಾರೆ.ಜನರಿಗೆ ಸುಳ್ಳು ಭರವಸೆ ನೀಡಿದ ಸರ್ಕಾರ ಅಂದ್ರೆ ಸಿದ್ದರಾಮಯ್ಯನ ಸರ್ಕಾರ ಎಂದು ಛೇಡಿಸಿದರು
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಈ ಭಾಗದ ನಿಂತು ಹೋದ ಎಲ್ಲಾ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು.ಕೇಂದ್ರ ಸರ್ಕಾರದಿಂದ ನೀರಾವರಿ ಯೋಜನೆಗಾಗಿ 1ಲಕ್ಷ ಕೋಟಿ ಜಾರಿ ಮಾಡಿಸಲಾಗುತ್ತೆ.ಯಾವೊಬ್ಬ ರೈತನ ಮನೆಯಲ್ಲಿ ಸಾಲ ಇಲ್ಲದಂತೆ ಸಾಲಮನ್ನಾ ಮಾಡಲಾಗುವುದು.ಅಧಿಕಾರ ಬಂದ 24 ಗಂಟೆಗಳಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನ್ನಾ ಮಾಡಲಾಗುತ್ತೆ 
 
.ಚಾಮುಂಡೇಶ್ವರಿ ಸಿದ್ದರಾಮಯ್ಯನನ್ನು ತಿರಸ್ಕರಿಸಿದ್ದಾಳೆ. ಇನ್ನು ಬನಶಂಕರಿ ತಾಯಿ ಬಿಡ್ತಾಳಾ..? ಎಲ್ಲಾ ಸಮಾಜದಲ್ಲಿ ಬೆಂಕಿ ಹಚ್ಚಿದ್ದು ಸಿದ್ದರಾಮಯ್ಯ.ಬಿಜೆಪಿಯಲ್ಲಿ ಆ ಜಾತಿ ಈ ಜಾತಿ ಗೊತ್ತಿಲ್ಲ.ಆದ್ರೆ ಕಾಂಗ್ರೆಸ್ ಪಕ್ಷ ಜಾತಿಗಳಲ್ಲಿ ಬೆಂಕಿ ಹಚ್ಚಿ ರಾಜಕೀಯ ಮಾಡುತ್ತೆ.ಕರ್ನಾಟಕದಲ್ಲಿ ಕಾಂಗ್ರೆಸ್ ನ ನಾಟಕ ನಡೆಯೋಲ್ಲ ಇಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ ಎಂದರು. 
 
ನೀರಾವರಿ, ಶಿಕ್ಷಣ, ರಕ್ಷಣೆ, ಉದ್ಯೋಗ ಎಲ್ಲವನ್ನು ಪೂರೈಸುತ್ತೇವೆ. ದೊಡ್ಡನಗೌಡರನ್ನು ಗೆಲ್ಲಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹನುಮನಾಳ ಬಹಿರಂಗ ಸಭೆಯಲ್ಲಿ ರಾಮುಲು ಹೇಳಿಕೆ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯತ್ನರಹಿತವಾದ ಧ್ಯಾನವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಸಹೋದರಿಯಿಂದ ಕಲಿಯಿರಿ