Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪರ ಮತಯಾಚಿಸಿದ ಲೂಸ್ ಮಾದ ಖ್ಯಾತಿಯ ನಟ ಯೋಗೇಶ್

ಕಾಂಗ್ರೆಸ್ ಪರ ಮತಯಾಚಿಸಿದ ಲೂಸ್ ಮಾದ ಖ್ಯಾತಿಯ ನಟ ಯೋಗೇಶ್
ಬೆಂಗಳೂರು , ಸೋಮವಾರ, 30 ಏಪ್ರಿಲ್ 2018 (07:10 IST)
ಬೆಂಗಳೂರು : ಚುನಾವಣಾ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನಟ ಲೂಸ್ ಮಾದ ಖ್ಯಾತಿಯ ಯೋಗೇಶ್ ಅವರು ಪ್ರಚಾರ ಕಾರ್ಯಕ್ಕೆ ಇಳಿದಿದ್ದು, ಕಾಂಗ್ರೆಸ್ ಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.


ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ ನಟ ಯೋಗೇಶ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ ‘ಬಿಜೆಪಿ ಸರ್ಕಾರದವರು ಯಾವತ್ತೂ ಅಚ್ಛೇ ದಿನ್ ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅದು ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಎಲ್ಲರೂ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿ. ನಾನು ಇರೋವರೆಗೂ ಕಾಂಗ್ರೆಸ್ ಗೇ ಸಪೋರ್ಟ್ ಮಾಡೋದು. ನೀವೂ ಕೂಡ ಕಾಂಗ್ರೆಸ್ ಗೆ ಬೆಂಬಲ ಕೊಡಿ’ ಎಂದು ಮನವಿ ಮಾಡಿದ್ದಾರೆ.


ಬಿಜೆಪಿಯವರು ಯಾವ ಕೆಲಸನೂ ಮಾಡಿಕೊಟ್ಟಿಲ್ಲ. ನಿಮ್ಮಲ್ಲರನ್ನೂ ಮೆಚ್ಚಿಸಬೇಕು ಅಂತ ನಾನು ಇದನ್ನು ಹೇಳುತ್ತಿಲ್ಲ. ನನ್ನ ಸ್ವಂತ ಅನುಭವ ಇದು. ಹೀಗಾಗಿ ನಾನು ನೋಡಿರೋ ವಿಚಾರವನ್ನು ನಿಮಗೆ ಹೇಳಬೇಕು. ಅವರು ಯಾವ ಕೆಲಸನೂ ಮಾಡಲ್ಲ. ಜೈಲಿನಲ್ಲಿದ್ದವರನ್ನು ಇಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಂತೆ. ಕಳ್ಳರಿಗೆಲ್ಲ ನೀವು ಮತ ಹಾಕಬೇಡಿ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ನಮ್ಮಪ್ಪ ನನಗೆ 'ಗೌಡ' ಎಂದು ಹೆಸರಿಟ್ಟಿದ್ದು ತಪ್ಪಾ?- ಹೆಚ್.ಡಿ.ದೇವೆಗೌಡ