Publish Date: Sun, 29 Apr 2018 (11:30 IST)
Updated Date: Sun, 29 Apr 2018 (11:32 IST)
ಬೆಂಗಳೂರು: ಒಂದು ಕಾಲದಲ್ಲಿ ಕುಚುಕು ಗೆಳೆಯರಂತಿದ್ದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇರೆ ಬೇರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಸ್ಯಾಂಡಲ್ ವುಡ್ ನ ಈ ಪ್ರತಿಭಾವಂತ ನಟರು ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು, ಕಲಾವಿದರು ಬಯಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಮತ್ತೆ ಒಂದಾಗಿ ಸಿನಿಮಾ ಮಾಡಿ, ಇಬ್ಬರೂ ಜತೆಯಾಗಿರುವುದನ್ನು ನೋಡಲು ಕರ್ನಾಟಕವೇ ಬಯಸುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಿಚ್ಚ ಪ್ರತಿಕ್ರಿಯಿಸಿದ್ದಾರೆ.
‘ಅವರು ನನ್ನ ಗೆಳೆಯ, ಮುಂದೆಯೂ ಗೆಳೆಯನಾಗಿಯೇ ಇರುತ್ತಾರೆ. ನಾವಿಬ್ಬರೂ ಜತೆಯಾಗಿ ಕಾಣಿಸಿಕೊಳ್ಳುವಂತಹ ಸ್ಕ್ರಿಪ್ಟ್ ಬಂದರೆ ಖಂಡಿತಾ ರೆಡಿ’ ಎಂದು ಕಿಚ್ಚ ಹೇಳಿಕೊಂಡಿದ್ದಾರೆ. ಆ ಮೂಲಕ ದರ್ಶನ್ ಮೇಲೆ ತಮಗೇನೂ ಧ್ವೇಷವಿಲ್ಲ ಎಂದು ಸಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.