Publish Date: Sun, 29 Apr 2018 (11:39 IST)
Updated Date: Sun, 29 Apr 2018 (11:41 IST)
ಬೆಂಗಳೂರು: ಬೆಳಗಾವಿಯ ಗಡಿ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ನನಗೆ ಮರಾಠಿ ಬರಲ್ಲ ಕ್ಷಮಿಸಿ, ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ಮುಖ್ಯಮಂತ್ರಿಗಳು ಮರಾಠಿಗರಲ್ಲಿ ಕ್ಷಮೆ ಕೇಳುವುದರ ಅಗತ್ಯವೇನಿತ್ತು? ನಮ್ಮದು ಕನ್ನಡ ಭಾಷೆ ಎಂದು, ಕನ್ನಡದಲ್ಲೇ ಮಾತಾಡಬೇಕಿತ್ತು. ಮರಾಠಿಗರ ಕ್ಷಮೆ ಕೇಳಿ ಸಿಎಂ , ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳಿಗೆ ನಿಜವಾದ ಕನ್ನಡ ಪ್ರೇಮ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.