Select Your Language

Notifications

webdunia
webdunia
webdunia
webdunia

ಪ್ರಯತ್ನರಹಿತವಾದ ಧ್ಯಾನವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಸಹೋದರಿಯಿಂದ ಕಲಿಯಿರಿ

ಪ್ರಯತ್ನರಹಿತವಾದ ಧ್ಯಾನವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಸಹೋದರಿಯಿಂದ ಕಲಿಯಿರಿ
ನವದೆಹಲಿ , ಸೋಮವಾರ, 30 ಏಪ್ರಿಲ್ 2018 (12:57 IST)
ಭಾರತಾದ್ಯಂತ ಸಾವಿರಾರು ಜನರು ಸಹಜ ಸಮಾಧಿಯ ಧ್ಯಾನದ ರೀತಿಯನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಸಹೋದರಿಯಾದ, ಗುರುದೇವರ ಬಗ್ಗೆ ಬರೆದಿರುವ ಪುಸ್ತಕದ ಲೇಖಕಿಯಾದ ಶ್ರೀಮತಿ ಭಾನುಮತಿ ನರಸಿಂಹನ್ರವರಿಂದ, ಮೇ 4 ರಿಂದ 6ನೆಯ ತಾರೀಖಿನಂದು  ಕಲಿಯಲಿದ್ದಾರೆ.
 3,000ಕ್ಕಿಂತಲೂ ಹೆಚ್ಚು ವೈಜ್ಞಾನಿಕ ಪತ್ರಗಳು ಧ್ಯಾನದಿಂದ ಉಂಟಾಗುವ ಲಾಭಗಳ ಬಗ್ಗೆ ತಿಳಿಸಿದ್ದು, ಈ ವಿಷಯ ಈಗ ಸಾಮಾನ್ಯ ಜ್ಞಾನವಾಗಿದೆ. ಸಹಜ ಸಮಾಧಿಯ ಲಾಭಗಳೆಂದರೆ ಸ್ಪಷ್ಟವಾದ ತಿಳಿವಳಿಕೆ, ಹೆಚ್ಚಿನ ಶಕ್ತಿ, ಉತ್ತಮ ದೈಹಿಕ ಆರೋಗ್ಯ, ಸುಧಾರಿತವಾದ ಸಂಬಂಧಗಳು ಮತ್ತು ಹೆಚ್ಚಿನ ಮನಸ್ಸಿನ ಶಾಂತಿ.
 
 ಕಳೆದ ವರ್ಷದ ವಿಶ್ವ ಮಾನಸಿಕ ತಜ್ಞರ ಅಸೊಸಿಯೇಷನ್ನ ವಾರ್ಷಿಕ ಸಮಾವೇಶದಲ್ಲಿ ಸಹಜ ಸಮಾಧಿ ಧ್ಯಾನದ ಪ್ರಭಾವಗಳ ಬಗ್ಗೆ, ಹೃದ್ರೋಗದ ಮೇಲಿನ , ನರವ್ಯವಸ್ಥೆಯ ಮೇಲಿನ ಹಾಗೂ ಖಿನ್ನತೆಯ ಮೇಲಿನ ಪ್ರಭಾವದ ಬಗ್ಗೆ ಮಂಡಿಸಲಾದ ಪತ್ರಕ್ಕೆ ಉತ್ತಮ ಸಂಶೋಧನಾ ಪ್ರಶಸ್ತಿ ದೊರೆಯಿತು. 
 
 ಸಹಜ ಸಮಾಧಿ ಕಾರ್ಯಕ್ರಮವು ಪ್ರಯತ್ನರಹಿತವಾದ ಧ್ಯಾನವನ್ನು ಮತ್ತು ಸುಲಭವಾಗಿ ಅಭ್ಯಾಸ ಮಾಡಬಲ್ಲ ಧ್ಯಾನವನ್ನು ಬೋಧಿಸುತ್ತದೆ. 14ವರ್ಷಕ್ಕಿಂತಲೂ ಮೇಲ್ಪಟ್ಟ ಯಾರು ಬೇಕಾದರೂ ಧ್ಯಾನವನ್ನು ಮಾಡಬಹುದು. ಸರಳವಾದ ಶಬ್ದವನ್ನು ಮಾನಸಿಕವಾಗಿ ಬಳಸುವ ರೀತಿಯನ್ನು ಶಿಬಿರಾರ್ಥಿಗಳನ್ನು ಬೋಧಿಸಲಾಗುತ್ತದೆ. ಇದರಿಂದ ಮನಸ್ಸು ನೆಲೆ ನಿಲ್ಲುತ್ತದೆ. ಮನಸ್ಸು ಈ ಧ್ಯಾನಸ್ಥ ಸ್ಥಿತಿಗತಿಗಳ ತಲುಪಿದಾಗ ಒತ್ತಡದ ನಿವಾರಣೆಯಾಗುತ್ತದೆ, ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಜೀವನದ ಸ್ಪಷ್ಟತೆ ಹೆಚ್ಚುತ್ತದೆ. 
 
 ಶ್ರೀಮತಿ ಭಾನುಮತಿ ನರಸಿಂಹನ್ರವರು, " ಧ್ಯಾನದಿಂದ ಶಕ್ತಿ ಯುತರಾಗಿರುತ್ತೀರಿ ಮತ್ತು ಇಡೀ ದಿನ ಫಲದಾಯಕವಾಗಿ ಕೆಲಸ ಮಾಡಬಲ್ಲಿರಿ. ಅಲುಗಾಡಿಸಲಾರದ ಮುಗುಳ್ನಗೆ ಉಕ್ಕುತ್ತದೆ" ಎಂದು ಈ ವಿಶಿಷ್ಟವಾದ ಧ್ಯಾನದ ಬಗ್ಗೆ ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ಶ್ರೀರಾಮುಲು ಬಹಿರಂಗ ಸವಾಲು