Publish Date: Mon, 18 Sep 2017 (16:07 IST)
Updated Date: Mon, 18 Sep 2017 (16:11 IST)
ಬೆಂಗಳೂರು: ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣದ ಜತೆಯಲ್ಲೇ ಕೆಲ ಪಾತ್ರಗಳ ಆಯ್ಕೆ ಸಹ ನಡೆಯುತ್ತಿದೆ. ಈಗ ದರ್ಶನ್ ಪತ್ನಿ ಪಾತ್ರಕ್ಕೆ ನಾಯಕಿ ಆಯ್ಕೆ ಫೈನಲ್ ಆಗಿದೆ.
ಕುರುಕ್ಷೇತ್ರದಲ್ಲಿ ದುರ್ಯೋಧನ ಪಾತ್ರಧಾರಿ ದರ್ಶನ್ ಪತ್ನಿ ಭಾನುಮತಿ ಪಾತ್ರಕ್ಕೆ ಮಾಲಿವುಡ್ ನಟಿ ರಮ್ಯಾ ನಂಬೀಸನ್ ರನ್ನ ಚಿತ್ರತಂಡ ಆಯ್ಕೆ ಮಾಡಿದೆ. ಈ ಹಿಂದೆ ಈ ಪಾತ್ರದಲ್ಲಿ ನಟಿ ರೆಜಿನಾ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು.
ರಮ್ಯಾ ನಂಬೀಸನ್ ಗೆ ಕನ್ನಡದಲ್ಲಿ ಇದು ಎರಡನೇ ಸಿನಿಮಾ. ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಜತೆ 'ಸ್ಟೈಲ್ ಕಿಂಗ್' ಚಿತ್ರದಲ್ಲಿ ನಟಿಸಿದ್ದರು. ಇದೇ ಅಕ್ಟೋಬರ್ ನಿಂದ ರಮ್ಯಾ ಪಾತ್ರದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.