Publish Date: Tue, 14 Jun 2022 (11:50 IST)
Updated Date: Tue, 14 Jun 2022 (11:51 IST)
ವಾಷಿಂಗ್ಟನ್ : ಅನೇಕ ದೇಶಗಳಲ್ಲಿ ಸರ್ಕಾರ ಕಾಂಡೋಮ್ಗಳನ್ನು ಉಚಿತವಾಗಿ ಪೂರೈಸುತ್ತದೆ.
ಇನ್ನೂ ಅನೇಕ ದೇಶಗಳಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಈ ವಿಚಾರವಾಗಿ ವಿವಿಧ ರೀತಿಯ ಕಾನೂನುಗಳಿವೆ. ಆದರೆ ಇತ್ತೀಚೆಗೆ ವೆನೆಜುವೆಲಾದಲ್ಲಿ ಕಾಂಡೋಮ್ ಬೆಲೆ ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ದೇಶದಲ್ಲಿ ಒಂದು ಪ್ಯಾಕ್ ಕಾಂಡೋಮ್ ಬೆಲೆ ಸುಮಾರು 60,000 ರೂಪಾಯಿ ಎಂದು ತಿಳಿದು ಬಂದಿದೆ. ಕಾಂಡೋಮ್ಗಳಲ್ಲಿ ವಿವಿಧ ರೀತಿಯ ಹೆಸರಾಂತ ದುಬಾರಿ ಬ್ರ್ಯಾಂಡ್ಗಳಿದೆ.
ಎಂದಾದರೂ ಕಾಂಡೋಮ್ ಬೆಲೆ 60,000 ರೂಪಾಯಿ ಎಂದು ನೀವು ಕೇಳಿದ್ದೀರಾ? ಆದರೆ ವೆನೆಜುವೆಲಾದ ಸಾಮಾನ್ಯ ಕಾಂಡೋಮ್ಗಳ ಬೆಲೆಯು ಪ್ರತಿಷ್ಠಿತ ಬ್ರ್ಯಾಂಡ್ನ ಟಿವಿ ಬೆಲೆಗಿಂತಲೂ ಹೆಚ್ಚಾಗಿದೆ. ಕಾಂಡೋಮ್ಗೆ ನೀಡುವ ಬೆಲೆಗೆ ಟಿವಿಯನ್ನೇ ಖರೀದಿಸಬಹುದು ಎನ್ನಲಾಗಿದೆ.
ವೆನೆಜುವೆಲಾದ ಅಂಗಡಿಯೊಂದರಲ್ಲಿ ಒಂದು ಪ್ಯಾಕ್ ಕಾಂಡೋಮ್ 60,000 ರೂ.ಗೆ ಮಾರಾಟವಾಗುತ್ತಿದೆ. ಪ್ರಪಂಚಾದ್ಯಂತ ಈ ಸುದ್ದಿ ಜನರನ್ನು ದಿಗ್ಭ್ರಮೆಗೊಳಿಸಿದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.