Select Your Language

Notifications

webdunia
webdunia
webdunia
webdunia

17 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿ ಕೇಂದ್ರ ಆದೇಶ

17 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿ ಕೇಂದ್ರ ಆದೇಶ
bengaluru , ಬುಧವಾರ, 8 ಜೂನ್ 2022 (18:09 IST)
ಭತ್ತ, ರಾಗಿ ಸೇರಿದಂತೆ ದೇಶದ ಪ್ರಮುಖ ೧೭ ಮುಂಗಾರು ಬೆಳೆಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಮೂಲಕ ರೈತರಿಗೆ ಸಿಹಿಸುದ್ದಿ ನೀಡಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್‌ ಠಾಕೂರ್‌ ಬುಧವಾರ ಈ ಘೋಷಣೆ ಮಾಡಿದ್ದು, ಮುಂಗಾರು ಬೆಳೆಗಳ ಬೆಂಬಲ ಬೆಲೆಯಲ್ಲಿ ಶೆ.1ರಿಂದ 5 ಪಟ್ಟು ಹೆಚ್ಚಿಸಿದೆ ಎಂದರು.
ಕ್ವಿಂಟಲ್‌ ಆಧಾರದಲ್ಲಿ ಭತ್ತಕ್ಕೆ ನೀಡಲಾಗಿದ್ದ ಬೆಂಬಲ ಬೆಲೆಯಲ್ಲಿ ಕೇವಲ 100ರೂ. ಅಂದರೆ 2040 ರೂ.ಗೆ ಹೆಚ್ಚಿಸಲಾಗಿದೆ. ಬೆಳೆಗೆ 450 ರೂ. , ಎಳ್ಳಿಗೆ 323 ರೂ. ಮೆಕ್ಕೆಜೋಳಕ್ಕೆ 92 ರೂ., ಸೂರ್ಯಕಾಂತಿಗೆ 358 ರೂ., ಸೊಯಾಬಿನ್‌ ಗೆ 350 ರೂ., ತೊಗರಿ ಬೇಳೆಗೆ 300 ರೂ., ಹೆಸರು ಬೇಳೆಗೆ 201 ರೂ. ಹೆಚ್ಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡಿಟ್ಟು ಹೊಡಿಯುವ ಹೇಳಿಕೆಗೆ ಈಗಲೂ ಬದ್ಧ: ಮುತಾಲಿಕ್