Select Your Language

Notifications

webdunia
webdunia
webdunia
Sunday, 20 April 2025
webdunia

ಸಿಎಂ ಕುಮಾರಸ್ವಾಮಿ ಸೂಟ್ ಕೇಸ್ ಒಳಗೆ ಏನೇನು ಹೊತ್ತು ತರುತ್ತಾರೆ?!

ಸಿಎಂ ಕುಮಾರಸ್ವಾಮಿ
ಬೆಂಗಳೂರು , ಗುರುವಾರ, 5 ಜುಲೈ 2018 (08:49 IST)
ಬೆಂಗಳೂರು: ಇಂದು ರಾಜ್ಯ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನ್ನು ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಲಿದ್ದು, ನಿರೀಕ್ಷೆಗಳ ಮೂಟೆಯೇ ಹೊತ್ತು ಬರಲಿದ್ದಾರೆ.

ಸಿಎಂ ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ ನಲ್ಲಿ ಮುಖ್ಯವಾಗಿ ರೈತರ ಸಾಲಮನ್ನಾ, ಕೃಷಿ ನೀರಾವರಿಗೆ ಹೆಚ್ಚಿನ ಅನುದಾನ ಸಿಗಬಹುದೆಂದು ನಿರೀಕ್ಷಿಸಲಾಗಿದೆ.

ಈಗಾಗಲೇ ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದಂತೆ ಎರಡೂ ಪಕ್ಷಗಳ ಪ್ರಣಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗುವುದು ಎನ್ನಲಾಗಿದೆ. ರೈತರಿಗೆ 2 ಲಕ್ಷ ರೂ.ವರೆಗಿನ ಸಾಲಮನ್ನಾ, ಬಡವರಿಗೆ ಮನೆಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳು ಸಿಎಂ ಮಂಡಿಸಲಿರುವ ಬಜೆಟ್ ನಲ್ಲಿರಲಿದೆ. ಈ ಬಜೆಟ್ ಮುಂದಿನ ಐದು ವರ್ಷಗಳ ಕಾಲ ಸರ್ಕಾರದ ದಿಕ್ಸೂಚಿಯಾಗಲಿದೆ ಎಂದು ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಅವರು ನೀಡಿರುವ ಭರವಸೆಗಳು ಎಷ್ಟು ಉಳಿಯುತ್ತವೆ, ಎಷ್ಟು ನೆರವೇರುತ್ತದೆ ಎನ್ನುವುದು ಇಂದು ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಫಿಲಿಪ್ಪೀನ್ಸ್ ; ಮತ್ತೊಬ್ಬ ಮೇಯರ್ ನನ್ನು ಹತ್ಯೆಗೈದ ದುಷ್ಕರ್ಮಿಗಳು