Publish Date: Mon, 02 Jul 2018 (19:35 IST)
Updated Date: Mon, 02 Jul 2018 (19:39 IST)
ಜನಪ್ರತಿನಿಧಿ ಎಂದರೆ ಕೆಲವರು ತಮ್ಮದೇ ಆದ ವಿಶೇಷತೆಯನ್ನು ಹೊಂದಿರುತ್ತಾರೆ. ಅಭಿಮಾನಿಗಳ, ಕಾರ್ಯಕರ್ತರ ಪ್ರೀತಿ, ಒತ್ತಾಯಗಳಿಗೆ ಕೆಲವೊಂದು ಸಾರಿ ಮಣಿಯಲೇಬೇಕಾಗುತ್ತದೆ. ಕಾರ್ಯಕರ್ತರ ಜೋಶ್ ನೊಂದಿಗೆ ಶಾಸಕರೊಬ್ಬರು ಟಪ್ಪಾಂಗುಚ್ಚಿ ಸ್ಟೇಪ್ಸ್ ಹಾಕಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮ ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸಮುದಾಯದವರೊಂದಿಗೆ ಸಡಗರದಿಂದ ಕುಣಿದು ಕುಪ್ಪಳಿಸಿದ್ದಾರೆ. ಜೆಡಿಎಸ್ ಹಿರಿಯ ನಾಯಕರನ್ನು ತನ್ನ ಜತೆ ಕರೆದುಕೊಂಡು ಹೆಜ್ಜೆ ಹಾಕಿರುವ ಶಾಸಕರ ಡ್ಯಾನ್ಸ್ ಈಗ ಸಖತ್ ವೈರಲ್ ಆಗಿದೆ.