Publish Date: Mon, 02 Jul 2018 (19:12 IST)
Updated Date: Mon, 02 Jul 2018 (19:25 IST)
ತಂಬಾಕು ಬೆಳೆಗಾರರಿಗೆ ಕೆಲವು ಖಾಸಗಿ ಕಂಪನಿಗಳು ಮಹಾ ಮೋಸ ಮಾಡುತ್ತಿವೆಯಾ? ಇಂತಹದೊಂದು ಅನುಮಾನ ಬೆಳೆಗಾರರನ್ನು ಕಾಡಲಾರಂಭಿಸಿದೆ. ನಕಲಿ ಕಂಪನಿಯ ನಕಲಿ ಔಷಧ ನಂಬಿದ ರೈತನೊಬ್ಬ ಈಗ ಬೆಳೆ ಬಾರದೇ ಸಂಕಷ್ಟಕ್ಕೆ ಸಿಲುಕಿ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದಾನೆ.
ನಕಲಿ ಔಷಧ ಕೊಟ್ಟಿದ್ದರಿಂದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಲಕ್ಕೂರು ಗ್ರಾಮದ ದೊಡ್ಡೇಗೌಡ ಎಂಬುವರು ತಮ್ಮ 6 ಎಕರೆ ಪ್ರದೇಶದಲ್ಲಿ ನಷ್ಟ ಅನುಭವಿಸುವಂತಾಗಿದೆ. ಗ್ರೀನ್ ಲೈಫ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನಗೆ ಮೋಸ ಮಾಡಿದೆ ಎಂದು ಬೆಳಗಾರ ದೂರಿದ್ದಾನೆ. ಕಂಪನಿ ವಿರುದ್ಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಔಷಧ ಸಿಂಪರಣೆ ನಂತರ ತಂಬಾಕು ಸಂಪೂರ್ಣವಾಗಿ ಒಣಗಿದೆ. ಹೀಗಾಗಿ ಕಂಪನಿ ವಿರುದ್ಧ ಕ್ರಮ ಕೈಗೊಂಡು ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತ ದೊಡ್ಡೇಗೌಡ ಒತ್ತಾಯಿಸಿದ್ದಾರೆ.