Select Your Language

Notifications

webdunia
webdunia
webdunia
webdunia

ಅಮೆರಿಕಾದ ಭಾರತೀಯ ದೂತವಾಸದ ಹೆಸರು ಹೇಳಿ ಹಣ ವಸೂಲಿ ಮಾಡಿದ ಮೋಸಗಾರರು

ಅಮೆರಿಕಾದ ಭಾರತೀಯ ದೂತವಾಸದ ಹೆಸರು ಹೇಳಿ ಹಣ ವಸೂಲಿ ಮಾಡಿದ ಮೋಸಗಾರರು
ವಾಷಿಂಗ್ಟನ್ , ಮಂಗಳವಾರ, 6 ಮಾರ್ಚ್ 2018 (14:26 IST)
ವಾಷಿಂಗ್ಟನ್‌: ಅಮೆರಿಕದಲ್ಲಿರುವ ಭಾರತೀಯ ದೂತಾವಾಸದ ಹೆಸರಿನಲ್ಲಿ ಅಲ್ಲಿರುವ ಭಾರತೀಯರನ್ನು ಮೋಸಗೊಳಿಸಿರುವ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂತಾವಾಸ ಕಚೇರಿ, ಈ ಬಗ್ಗೆ ಅಮೆರಿಕ ಸರಕಾರಕ್ಕೆ ದೂರು ನೀಡಿದ್ದು, ಪ್ರಕರಣದ ಆಂತರಿಕ ತನಿಖೆಗೆ ಆದೇಶಿಸಿದೆ.

 
ಭಾರತೀಯರಿಗೆ ಕರೆ ಮಾಡುತ್ತಿದ್ದ ಮೋಸಗಾರರು, ‘ನಿಮ್ಮ ಪಾಸ್‌ಪೋರ್ಟ್‌, ವೀಸಾ ಅರ್ಜಿ, ವಲಸೆ ಅರ್ಜಿಗಳಲ್ಲಿ ತಪ್ಪಾಗಿದ್ದು, ಇದನ್ನು ಸರಿಪಡಿಸಲು ದಂಡದ ರೂಪದಲ್ಲಿ ಹಣ ಕಟ್ಟಬೇಕು. ಇಲ್ಲವಾದರೆ, ಅಮೆರಿಕದಿಂದ ಶೀಘ್ರವೇ ನಿಮ್ಮನ್ನು ಗಡಿಪಾರು ಮಾಡಲಾಗುವುದು ಎಂದು ಹೆದರಿಸಿ ಹಣವನ್ನು ವಸೂಲಿ ಮಾಡಿದ್ದಾರೆ.ಇನ್ನು ಅಮೆರಿಕಾ ವೀಸಾ ನಿರೀಕ್ಷೆಯಲ್ಲಿದ್ದ ಅರ್ಜಿದಾರರಿಗೂ ಇಂಥ ಕರೆಗಳು ಬಂದಿವೆಯಂತೆ.  ಈ ಬಗ್ಗೆ ಕೆಲವರು ದೂತಾವಾಸ ಕಚೇರಿಯಲ್ಲಿ ವಿಚಾರಣೆ ನಡೆಸಿದಾಗ ಈ ಮೋಸದ ಜಾಲ ಬಯಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ ಎಂದು ಹೇಳಿದವರು ಯಾರು ಗೊತ್ತಾ...?