Select Your Language

Notifications

webdunia
webdunia
webdunia
webdunia

ಮೊಳಕೆ ಕಟ್ಟಿದ ಹೆಸರು ಕಾಳಿನ ಉಸುಲಿ ರುಚಿ ನೋಡಿದ್ರಾ...?

ಮೊಳಕೆ ಕಟ್ಟಿದ ಹೆಸರು ಕಾಳಿನ ಉಸುಲಿ ರುಚಿ ನೋಡಿದ್ರಾ...?
ಬೆಂಗಳೂರು , ಗುರುವಾರ, 15 ಫೆಬ್ರವರಿ 2018 (07:48 IST)
ಬೆಂಗಳೂರು: ಮೊಳಕೆ ಬರಿಸಿದ ಹೆಸರುಕಾಳು ದೇಹಕ್ಕೆ ತಂಪು, ಪೌಷ್ಠಿಕಾಂಶಗಳ ಖನಿಜ ಮತ್ತು ನಾರಿನಂಶದಿಂದ ಸಮೃದ್ಧವಾಗಿರುತ್ತದೆ. ಇದನ್ನು ಹಸಿಯಾಗಿ ತಿನ್ನುವುದಕ್ಕಿಂತ ಬದಲು ಹಬೆಯಲ್ಲಿ ಅಥವಾ ಕುಕ್ಕರ್‌ನಲ್ಲಿ ಬೇಯಿಸಿ ಬಳಸಿದರೆ ವಾಯುಪ್ರಕೋಪವನ್ನು ತಡೆಯಬಹುದು. ಹಾಗಾಗಿ ಉಸುಲಿ ಅಥವಾ ಒಗ್ಗರಣೆ ರೂಪದಲ್ಲಿ ಸೇವಿಸಬಹುದು.


ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪಿನೊಂದಿಗೆ  ಮೊಳಕೆ ಕಟ್ಟಿದ ಹೆಸರುಕಾಳುಗಳನ್ನು ಬೇಯಿಸಿಕೊಳ್ಳಿ. ನಂತರ ಬಾಣಲೆಗೆ ಸಾಸಿವೆ, ಕರಿಬೇವು ಸೊಪ್ಪು, ಚಿಟಿಕೆ ಇಂಗು, 2 ಬ್ಯಾಡಗಿ ಮೆಣಸಿನ ಕಾಯಿ, ಅರಸಿನ ಹಾಕಿ ಒಗ್ಗರಣೆ ಸಿದ್ಧಪಡಿಸಿಕೊಂಡು ಅದಕ್ಕೆ ಬಸಿದ ಕಾಳು ಮತ್ತು ತೆಂಗಿನಕಾಯಿ ತುರಿ ಸೇರಿಸಿದರೆ ರುಚಿಕರವಾದ ಹೆಸರುಕಾಳು ಉಸುಲಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಜ್ಜಿಗೆ ಹುಳಿ ಮಾಡುವುದು ಹೇಗೆ ಗೊತ್ತಾ...?