Publish Date: Fri, 25 May 2018 (09:47 IST)
Updated Date: Fri, 25 May 2018 (09:48 IST)
ಬೆಂಗಳೂರು: ವಿಶ್ವಾಸ ಮತ ಯಾಚನೆ ಪ್ರಕ್ರಿಯೆಗಾಗಿ ಇಂದು ರಾಜ್ಯ ವಿಧಾನಸಭೆ ವಿಶೇಷ ಕಲಾಪ ನಡೆಯಲಿದ್ದು, ಇದಕ್ಕಾಗಿ ಸಿಎಂ ಕುಮಾರಸ್ವಾಮಿ ತಮ್ಮ ಜೆಪಿ ನಗರ ನಿವಾಸದಿಂದ ಹೊರಟಿದ್ದಾರೆ.
ಜೆಪಿ ನಗರ ನಿವಾಸದಿಂದ ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮನೆಗೆ ಭೇಟಿಯಿತ್ತ ಕುಮಾರಸ್ವಾಮಿ ತಂದೆಯ ಆಶೀರ್ವಾದ ಪಡೆದುದಲ್ಲದೆ, ಅವರ ಜತೆ ಚರ್ಚೆ ನಡೆಸಿದ್ದಾರೆ.
ಬಳಿಕ ಅವರು ನೇರವಾಗಿ ವಿಧಾನಸೌಧದತ್ತ ತೆರಳಲಿದ್ದಾರೆ. ಇದೇ ವೇಳೆ ಹೋಟೆಲ್ ಮತ್ತು ರೆಸಾರ್ಟ್ ನಲ್ಲಿರುವ ಜೆಡಿಎಸ್, ಕಾಂಗ್ರೆಸ್ ಶಾಸಕರು ಅಲ್ಲಿಂದಲೇ ನೇರವಾಗಿ ಬಸ್ ಗಳ ಮೂಲಕ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ವಿಶ್ವಾಸಮತ ಪ್ರಕ್ರಿಯೆ ಬಳಿಕ ಶಾಸಕರಿಗೆ ಬಿಡುಗಡೆಯ ಭಾಗ್ಯ ಸಿಗಲಿದ್ದು, ತಮ್ಮ ತಮ್ಮ ಕ್ಷೇತ್ರಕ್ಕೆ ಮರಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.