Publish Date: Fri, 25 May 2018 (09:37 IST)
Updated Date: Fri, 25 May 2018 (09:39 IST)
ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಉಳಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಲ್ಲಿರುವ ಕೇಂದ್ರದ ಬಿಜೆಪಿ ಸರ್ಕಾರ ಹೊಸ ಸ್ಲೋಗನ್ ಬಿಡುಗಡೆ ಮಾಡಿದೆ.
ಮುಂಬರುವ ಚುನಾವಣೆಗೆ ಒಂದು ವರ್ಷ ಬಾಕಿ ಇರುವಂತೆಯೇ ಬಿಜೆಪಿ ಸಿದ್ಧತೆ ಆರಂಭಿಸಿದೆ. 2019: ಮತ್ತೆ ಮೋದಿ ಸರ್ಕಾರ್ ಎಂದು ಹೊಸ ಘೋಷಣೆ ಬಿಡುಗಡೆ ಮಾಡಿದೆ.
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂದು ಪ್ರಚಾರ ಮಾಡಿದ್ದ ಮೋದಿ ಈ ಬಾರಿ ಫಿರ್ ಮೋದಿ ಸರ್ಕಾರ್ ಎನ್ನಲಿದೆ. ಕೆಲವು ಖಾಸಗಿ ವಾಹಿನಿಗಳು ನಡೆಸಿದ ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಮತ್ತೆ ಎನ್ ಡಿಎ ಮೈತ್ರಿ ಕೂಟ ಜಯ ಸಾಧಿಸಲಿದೆಯಂತೆ. ಆದರೆ ಕೆಲವು ಸ್ಥಾನ ಕಳೆದುಕೊಳ್ಳಲಿದೆ. ಹಾಗಿದ್ದರೂ ಬಹುಮತಕ್ಕೆ ಕೊರತೆಯಾಗದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.