Select Your Language

Notifications

webdunia
webdunia
webdunia
webdunia

ಗದ್ದಲ ಮಾಡ್ಬೇಕಂದ್ರೆ ಕಬ್ಬನ್ ಪಾರ್ಕ್ ಗೆ ಹೋಗ್ರೀ.. ರೈತರ ನಾಯಕರ ಮೇಲೆ ಸಿಟ್ಟಾದ ಸಿಎಂ ಕುಮಾರಸ್ವಾಮಿ

ಗದ್ದಲ ಮಾಡ್ಬೇಕಂದ್ರೆ ಕಬ್ಬನ್ ಪಾರ್ಕ್ ಗೆ ಹೋಗ್ರೀ.. ರೈತರ ನಾಯಕರ ಮೇಲೆ ಸಿಟ್ಟಾದ ಸಿಎಂ ಕುಮಾರಸ್ವಾಮಿ
ಬೆಂಗಳೂರು , ಬುಧವಾರ, 30 ಮೇ 2018 (12:43 IST)
ಬೆಂಗಳೂರು: ರೈತರ ಸಾಲಮನ್ನಾ ಕುರಿತು ರೈತ ನಾಯಕರೊಂದಿಗೆ ಸಂವಾದ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ ಸಭೆಯ ನಡುವೆ ರೈತ ನಾಯಕರ ಗದ್ದಲ ನೋಡಿ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆಯಿತು.

ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಜತೆಗೆ ರೈತ ನಾಯಕರೊಂದಿಗೆ ಸಭೆ ನಡೆಸುತ್ತಿದ್ದ ಸಿಎಂ ಸಾಲಮನ್ನಾ ಕುರಿತು ರೈತರ ಸಲಹೆ ಕೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಂಕಿ ಅಂಶಗಳ ಕುರಿತು ರೈತ ನಾಯಕರಲ್ಲೇ ಗೊಂದಲ ಉಂಟಾಗಿ ಗದ್ದಲ ಉಂಟಾಯಿತು.

ಯಾರೂ ಯಾರ ಮಾತೂ ಕೇಳದ ಪರಿಸ್ಥಿತಿಗೆ ತಲುಪಿದಾಗ ಮೈಕ್ ಕೈಗೆ ತೆಗೆದುಕೊಂಡ ಸಿಎಂ ಕುಮಾರಸ್ವಾಮಿ ‘ನಾನು ಪಲಾಯನಾವದಿಯಲ್ಲ. ನಿಮ್ಮ ಸಲಹೆ ಕೇಳಿ, ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ಈ ಸಭೆ ಕರೆದಿದ್ದೇನೆ. ನನಗೆ ನಿಮ್ಮ ಸಲಹೆ ಬೇಕು. ಗದ್ದಲ ಮಾಡಬೇಕೆಂದರೆ ಕಬ್ಬನ್ ಪಾರ್ಕ್ ಗೆ ಹೋಗಿ ಕುಳಿತುಕೊಳ್ಳಿ. ಇಲ್ಲಿ ಸ್ವಲ್ಪ ತಾಳ್ಮೆಯಿಂದಿರಿ’ ಎಂದು ಕುಮಾರಸ್ವಾಮಿ ಕೊಂಚ ಖಾರವಾಗಿಯೇ ಮನವಿ ಮಾಡಿದರು. ನಂತರ ರೈತ ನಾಯಕರ ಗದ್ದಲ ನಿಯಂತ್ರಣಕ್ಕೆ ಬಂತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೈತ ನಾಯಕರ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಸಂಸದ ಗೋವಿಂದ ಕಾರಜೋಳ ಗರಂ