Select Your Language

Notifications

webdunia
webdunia
webdunia
webdunia

ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಒಳಜಗಳದ ಬಗ್ಗೆ ಪ್ರತಿಕ್ರಿಯಿಸಿದ ನಟ ಜಗ್ಗೇಶ್

ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಒಳಜಗಳದ ಬಗ್ಗೆ ಪ್ರತಿಕ್ರಿಯಿಸಿದ ನಟ ಜಗ್ಗೇಶ್
ಬೆಂಗಳೂರು , ಬುಧವಾರ, 30 ಮೇ 2018 (07:08 IST)
ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಶುರುವಾದ ನಂತರ ಇದೀಗ ಸಚಿವ ಖಾತೆಗಾಗಿ ಪೈಪೋಟಿ ನಡೆಯುತ್ತಿದೆ. ಈ ಬಗ್ಗೆ ನಟ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.


ಯಡಿಯೂರಪ್ಪ ನಿವಾಸದ ಮುಂದೆ ಮಾತನಾಡಿದ ಜಗ್ಗೇಶ್ ಅವರು,’ಎಲ್ಲರೂ ಮಾಡುವುದು ಅಧಿಕಾರಕ್ಕಾಗಿ. ಒಂದು ಸಿನೆಮಾ ಪ್ಲಾಫ್‌ ಮಾಡಲು 25 ಸಿನೆಮಾ ಬಿಡುತ್ತಾರೆ. ರಾಜಕೀಯವೂ ಹಾಗೆಯೇ. ಕುಮಾರಸ್ವಾಮಿ ಐದು ವರ್ಷ ಅಧಿಕಾರ ಮಾಡಲು ಖಂಡಿತ ಕಾಂಗ್ರೆಸ್ ಬಿಡಲ್ಲ. ಆಗಲೇ ಸಣ್ಣದಾಗಿ ಒಳಜಗಳ ಮೈತ್ರಿ ಸರ್ಕಾರದಲ್ಲಿ ಶುರುವಾಗಿದೆ. ವೇಣುಗೋಪಾಲ್ ಹೇಳಿಕೆಯನ್ನು ಎಲ್ಲರೂ ಗಮನಿಸಿರಬಹುದು. ಕೆಲವು ದಿನಗಳಲ್ಲಿ ಏನಾಗುತ್ತೆ ಅಂತ ಕಾದು ನೋಡಿ. ಮೈತ್ರಿ ಸರ್ಕಾರ ಎನ್ನುವುದಕ್ಕಿಂತ ಅಪವಿತ್ರ ಮೈತ್ರಿ ಎನ್ನುತ್ತೇನೆ. ಜನ ಸಿಂಗಲ್‌ ಲಾರ್ಜೆಸ್ಟ್‌ ಪಾರ್ಟಿಯನ್ನಾಗಿ ಮಾಡಿದ್ದರೂ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಸುಗಳನ್ನು ಕೊಲ್ಲಲು ನ್ಯೂಜಿಲ್ಯಾಂಡ್ ನಿರ್ಧಾರ ಮಾಡಿದ್ದಾದರೂ ಏಕೆ…?