Select Your Language

Notifications

webdunia
webdunia
webdunia
webdunia

ಶಿವಾಚಾರ್ಯ ಸ್ವಾಮಿಜಿ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಭಾರಿ ಪ್ರತಿಭಟನೆ

ಶಿವಾಚಾರ್ಯ ಸ್ವಾಮಿಜಿ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಭಾರಿ ಪ್ರತಿಭಟನೆ
ರಾಮನಗರ , ಮಂಗಳವಾರ, 29 ಮೇ 2018 (18:40 IST)
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಚಿತ್ರದುರ್ಗದ ಸಾಣೇಹಳ್ಳಿ ಶಿವಚಾರ್ಯ ಸ್ವಾಮೀಜಿ ನೀಡಿರುವ ಹೇಳಿಕೆ ಖಂಡಿಸಿ ಎಚ್‌ಡಿಕೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣ ನಗರದ ಅಂಚೆಕಚೇರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಶಿವಚಾರ್ಯ ಸ್ವಾಮೀಜಿ ವಿರುದ್ಧ ಭಿತ್ತಿಪತ್ರಗಳನ್ನ ಹಿಡಿದು ಮೌನ ಪ್ರತಿಭಟನೆ ನಡೆಸಿದಲ್ಲದೇ ಚನ್ನಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ರು.
 
 ಇನ್ನು ರಾಜ್ಯ ಮಠಮಾನ್ಯಗಳಿಗೆ ಹೆಸರುವಾಸಿಯಾಗಿದ್ದು ಶಿಕ್ಷಣ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ. ಆದ್ರೆ ಇತ್ತಿಚಿನ ದಿನಗಳಲ್ಲಿ ಸ್ವಾಮೀಜಿಗಳು ಒಂದು ವರ್ಗ ಹಾಗೂ ಪಕ್ಷದ ಪರ ಹೇಳಿಕೆಗಳನ್ನ ನೀಡ್ತಾ ಇರೋದು ಖಂಡನೀಯ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ರು. 
 
ಅಲ್ಲದೇ ಗೌರವಯುತ ಸ್ಥಾನದಲ್ಲಿರುವ ಸ್ವಾಮೀಜಿಗಳು ಮಾರ್ಗದರ್ಶನ ನೀಡುವ ಬದಲು ಎಚ್‌ಡಿಕೆ ವಿರುದ್ಧವಾಗಿ ಮಾತನಾಡುವ ಮೂಲಕ ಒಂದು ಪಕ್ಷವನ್ನ ತುಳಿಯಲು ಹವಣಿಸಿದ್ದಾರೆ ಎಂದು ಆರೋಪಿಸಿದ್ರು. ಇನ್ನು ಒಂದು ಪಕ್ಷದ ಪರ ನಿಲ್ಲುವ ಬದಲು ಸರ್ಕಾರಗಳು ತಪ್ಪು ಮಾಡಿದಾಗ ಕಿವಿ ಹಿಂಡುವ ಕೆಲಸ ಮಾಡುವುದನ್ನ ಬಿಟ್ಟು ಸಮಾಜವನ್ನ ಒಡೆಯುವ ಕೆಲಸಕ್ಕೆ ಸ್ವಾಮೀಜಿಗಳು ಮುಂದಾಗಬಾರದು ಎಂದು ಶಿವಚಾರ್ಯ ಸ್ವಾಮೀಜಿ ವಿರುದ್ಧ ಕಿಡಿಕಾರಿದ್ರು. ಈ  ಕೂಡಲೇ ಸಾಣೇಹಳ್ಳಿ ಶಿವಚಾರ್ಯ ಸ್ವಾಮೀಜಿಯವರು ತಮ್ಮ ನಿಲುವನ್ನ ಬದಲಿಸಿ ಹೇಳಿಕೆ ವಾಪಸ್ಸು ಪಡೆಯುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಅಗ್ರಹಿಸಿದ್ರು.  
 

Share this Story:

Follow Webdunia kannada

ಮುಂದಿನ ಸುದ್ದಿ

ಮೆಕನ್ ಚಂಡುಮಾರುತ ಹಾವಳಿಗೆ ತತ್ತರಿಸಿದ ಉಡುಪಿ