Publish Date: Wed, 25 Apr 2018 (07:07 IST)
Updated Date: Wed, 25 Apr 2018 (12:20 IST)
ಬೆಂಗಳೂರು: ಎಷ್ಟೇ ಇಲ್ಲ ಇಲ್ಲ ಎನ್ನುತ್ತಿದ್ದರೂ ಪುತ್ರ ಬಿವೈ ವಿಜಯೇಂದ್ರಗೆ ವರುಣಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬೇಸರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತಿನಲ್ಲಿ ವ್ಯಕ್ತವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡುವಾಗ ಯಡಿಯೂರಪ್ಪ ಈ ಬಗ್ಗೆ ಅಸಮಾಧಾನದ ಸುಳಿವು ನೀಡಿದ್ದಾರೆ. ಟಿಕೆಟ್ ಕನ್ ಫರ್ಮ್ ಆಗುವ ಮೊದಲೇ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದ ವಿಜಯೇಂದ್ರ ಅಲ್ಲಿಯೇ ಅನುಕೂಲಕ್ಕಾಗಿ ಮನೆಯನ್ನೂ ಮಾಡಿಕೊಂಡಿದ್ದರು.
ಒಂದು ವೇಳೆ ಪಕ್ಷದ ವರಿಷ್ಠರು ಟಿಕೆಟ್ ನೀಡುವುದಿಲ್ಲವೆಂದು ಮೊದಲೇ ತಿಳಿಸಿದ್ದರೆ ಇಷ್ಟೆಲ್ಲಾ ತಯಾರಿ ಮಾಡುತ್ತಿರಲಿಲ್ಲ. ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಓಡಾಡುತ್ತಲೇ ಇರಲಿಲ್ಲ ಎನ್ನುವ ಮೂಲಕ ಯಡಿಯೂರಪ್ಪ ಪರೋಕ್ಷವಾಗಿ ಹೈಕಮಾಂಡ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.