Publish Date: Tue, 24 Apr 2018 (16:59 IST)
Updated Date: Tue, 24 Apr 2018 (17:00 IST)
ನಾಮಪತ್ರ ಸಲ್ಲಿಕೆಗೆ ದಾಖಲಾತಿ ಕೊರತೆ ಉಂಟಾಗಿ ಮಳವಳ್ಳಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಮೂರು ಗಂಟೆ ಕಾದು ಕುಳಿತ ಘಟನೆ ನಡೆದಿದೆ.
ಮಳವಳ್ಳಿ ಪಟ್ಟಣದ ಮಿನಿವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದ ಸೋಮಶೇಖರ್ ಅವರು ನಾಮಪತ್ರ ಸಲ್ಲಿಕೆಗೆ ಅಗತ್ಯ ದಾಖಲಾತಿ ತಂದಿರಲಿಲ್ಲ. ಚುನಾವಣಾಧಿಕಾರಿ ಶೈಲಜಾ ದಾಖಲಾತಿ ಪರಿಶೀಲನೆ ಮಾಡಿದಾಗ ದಾಖಲಾತಿ ಕೊರತೆ ಗೊತ್ತಾಗಿದೆ.
ಕೂಡಲೇ ದಾಖಲಾತಿ ತರಲು ಮನೆಗೆ ಮಗನನ್ನು ಕಳುಹಿಸಿದ ಸೋಮಶೇಖರ್, ಮಗ ಬರುವವರೆಗೂ ಮೂರು ಗಂಟೆ ಕಾದು ಕುಳಿತಿದ್ದಾರೆ. ಅಂತಿಮವಾಗಿ ಪುತ್ರ ದಾಖಲಾತಿ ತಂದ ಬಳಿಕ 2.55ಕ್ಕೆ ಸೋಮಶೇಖರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.