ಚೆನ್ನೈ : ತಮಿಳುನಾಡಿನಲ್ಲಿ ಇಂದಿನಿಂದ ಮದ್ಯ ಬೆಲೆ ಏರಿಕೆಯಾಗಿದ್ದು, 180 ಎಂಎಲ್ ಬಾಟಲಿಗೆ 10 ರೂಪಾಯಿ ಮತ್ತು 375 ಎಂಎಲ್ ಮದ್ಯದ ಬಾಟಲಿಗೆ 20 ರೂಪಾಯಿಯನ್ನು ಹೆಚ್ಚಿಸಲಾಗಿದೆ.
ಮಾರ್ಚ್ 5ರ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಟಿಅಎಸ್ಎಂಎಸಿ) ಎಂಬ ಬ್ಯಾನರ್ ಅಡಿಯಲ್ಲಿ ತಮಿಳುನಾಡಿನಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತದೆ.
ಈ ಮುನ್ನ ತಮಿಳುನಾಡಿನಲ್ಲಿ 2020ರಲ್ಲಿ ಮದ್ಯ ಬೆಲೆಯನ್ನು ಹೆಚ್ಚಿಸಲಾಗಿತ್ತು. ನಂತರ ಮೇ ತಿಂಗಳಿನಿಂದ ಮತ್ತೆ 20ರೂ.ಗಳಷ್ಟು ಬೆಲೆಯನ್ನು ಹೆಚ್ಚಿಸಲಾಗಿತ್ತು. ಕೋವಿಡ್-19 ಲಾಕ್ಡೌನ್ನಿಂದಾಗಿ 40 ದಿನಗಳ ನಂತರ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲಾಯಿತು.