ನವದೆಹಲಿ : ಉಕ್ರೇನ್ ಮೇಲಿನ ರಷ್ಯಾ ಯುದ್ಧ ಭಾರತ ಆರ್ಥಿಕತೆ ಮೇಲೆಯೂ ಭಾರೀ ಪರಿಣಾಮ ಬೀರಲು ಶುರು ಮಾಡಿದೆ.
ಚಿನ್ನ, ಬೆಳ್ಳಿ, ಸಿಮೆಂಟ್, ಕಬ್ಬಿಣದ ಬೆಲೆಯೂ ಹಿಗ್ಗಾಮುಗ್ಗಾ ಹೆಚ್ಚುತ್ತಿದೆ. ಇನ್ನೆರಡು ದಿನಗಳಲ್ಲಿ ಪೆಟ್ರೊಲ್, ಡೀಸೆಲ್ ಬೆಲೆಯೂ ದುಬಾರಿ ಆಗಲಿದ್ದು, ಆಗ ಇನ್ನೆಷ್ಟು ಹೆಚ್ಚಾಗಲಿದೆ?
ಸೆಮಿ ಕಂಡಕ್ಟರ್ಗಳಿಗೆ ಬಳಸುವ ಲೋಹದ ಕೊರತೆ ಎದುರಾಗ್ತಿರೋದ್ರಿಂದ ಮುಂದಿನ ದಿನಗಳಲ್ಲಿ ಮೊಬೈಲ್ ಫೋನ್, ವಾಹನ, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ದುಬಾರಿ ಆಗಲಿವೆ.
* ಸೂರ್ಯಕಾತಿ ಎಣ್ಣೆ(ಲೀ) – 140-180 ರೂ.
* ಶೇಂಗಾ ಎಣ್ಣೆ (ಲೀ) – 160-190 ರೂ.
* ಪೆಟ್ರೋಲ್(ಲೀ) – ಮಾರ್ಚ್ 16ರೊಳಗೆ 15 ರೂ. ಹೆಚ್ಚಳ ಸಾಧ್ಯತೆ
* ಡೀಸೆಲ್ (ಲೀ) – ಮಾರ್ಚ್ 16ರೊಳಗೆ 15 ರೂ. ಹೆಚ್ಚಳ ಸಾಧ್ಯತೆ
* ಬಂಗಾರ (24ಕೆ) (10 ಗ್ರಾಂ) – 53,950 ರೂ
* ಬೆಳ್ಳಿ (1ಕೆಜಿ)- 70,500 ರೂ.
* ಗೋಧಿ – ಶೇ.55ರಷ್ಟು ಹೆಚ್ಚಳ ಸಾಧ್ಯತೆ
(2,000 ರೂ. -2,100 ರೂ. ಆಜುಬಾಜಿನಲ್ಲಿದ್ದ ಕ್ವಿಂಟಾಲ್ ಗೋಧಿ ಈಗಾಗಲೇ 2500 ರೂ. ಆಗಿದೆ. ಅಮೆರಿಕಾದಲ್ಲಂತೂ 14 ವರ್ಷಗಳ ಗರಿಷ್ಠ ತಲುಪಿದೆ.)
* ಸಿಮೆಂಟ್ ಬ್ಯಾಗ್ – 30-50 ರೂ. ಹೆಚ್ಚಳ
* ಕಬ್ಬಿಣ (ಟನ್) – 10ಸಾವಿರ ರೂ. ಹೆಚ್ಚಳ
* ಮೊಬೈಲ್
* ವಾಹನ
* ಎಲೆಕ್ಟ್ರಾನಿಕ್ ಗೂಡ್ಸ್