Select Your Language

Notifications

webdunia
webdunia
webdunia
webdunia

ಧಿಡೀರ್‌ ಏರಿಕೆ ಕಂಡ ಚಿನ್ನದ ಬೆಲೆ!

ಧಿಡೀರ್‌ ಏರಿಕೆ ಕಂಡ ಚಿನ್ನದ ಬೆಲೆ!
ಬೆಂಗಳೂರು , ಶನಿವಾರ, 5 ಮಾರ್ಚ್ 2022 (11:09 IST)
ಬೆಂಗಳೂರು : ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು.
 
ಹೀಗಾಗಿ ಶುಭಕಾರ್ಯಗಳ ಸೀಸನ್ ಶುರುವಾದ ನಂತರ ಸಹಜವಾಗಿಯೇ ಬಂಗಾರ ಪ್ರಿಯರು ಬೆಲೆ ಇಳಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಬಜೆಟ್ ಮರುದಿನವೇ ಚಿನ್ನದ ಬೆಲೆ ಏರಿಕೆಯಾಗಿ ಗೋಲ್ಡ್ ಪ್ರಿಯರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಇಂದು ಮಾರ್ಚ್ 5 ಶನಿವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ₹5,204 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ ₹5,204 ರೂ ನಿಗದಿಯಾಗಿದೆ.

 
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹47,700 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹52,040 ರೂಪಾಯಿ ದಾಖಲಾಗಿದೆ.

 
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ

ಬೆಂಗಳೂರು: ₹47,700 (22 ಕ್ಯಾರಟ್) - ₹52,040 (24 ಕ್ಯಾರಟ್)
ಚೆನ್ನೈ: ₹48,830 (22 ಕ್ಯಾರಟ್) - ₹53,270 (24 ಕ್ಯಾರಟ್)
ದಿಲ್ಲಿ: ₹47,700 (22 ಕ್ಯಾರಟ್) - ₹52,040 (24 ಕ್ಯಾರಟ್)
ಹೈದರಾಬಾದ್: ₹47,700 (22 ಕ್ಯಾರಟ್) - ₹52,040 (24 ಕ್ಯಾರಟ್)

ಕೋಲ್ಕತಾ: ₹47,700 (22 ಕ್ಯಾರಟ್) - ₹52,040 (24 ಕ್ಯಾರಟ್)
ಮಂಗಳೂರು: ₹47,700 (22 ಕ್ಯಾರಟ್) - ₹52,040 (24 ಕ್ಯಾರಟ್)
ಮುಂಬಯಿ: ₹47,700 (22 ಕ್ಯಾರಟ್) - ₹52,040 (24 ಕ್ಯಾರಟ್)
ಮೈಸೂರು: ₹47,700 (22 ಕ್ಯಾರಟ್) - ₹52,040 (24 ಕ್ಯಾರಟ್)

 
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಅಸಮಾಧಾನ ವ್ಯಕ್ತಪಡಿಸಿದ್ದ ನಟ ಚೇತನ್?