Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ

ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ
ಬೆಂಗಳೂರು , ಶನಿವಾರ, 2 ಅಕ್ಟೋಬರ್ 2021 (17:36 IST)
ಬೆಂಗಳೂರು,ಅ.2 : ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮುಖ್ಯ ಆಯುಕ್ತ ಗೌರವ್ಗುಪ್ತ ಹೇಳಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಸ್ಟೋರೇಜ್ ಬಗ್ಗೆ ವೈದ್ಯರು ಚರ್ಚೆ ನಡೆಸಿದ್ದಾರೆ. ಮಕ್ಕಳ ಅಂಕಿ ಅಂಶದ ಬಗ್ಗೆ ಸರ್ವೆ ನಡೆಸಲಾಗುತ್ತಿದೆ.

ಮೊದಲ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಬೇಡಿಕೆ ಆಧಾರದ ಮೇಲೆ ಲಸಿಕೆ ಕೊಡಲಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ವ್ಯಾಕ್ಸಿನ್ ಕೊಡುವ ಬಗ್ಗೆ ಇನ್ನೂ ಸ್ಪಷ್ಟ ಆದೇಶ ಬಂದಿಲ್ಲ. ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದನೆ ಆಗಿದೆ. ಎಷ್ಟು ಸರಬರಾಜಾಗುತ್ತದೆ, ಯಾವ ವರ್ಗದವರಿಗೆ ಲಸಿಕೆ ನೀಡಬೇಕು ಎಂಬ ಮಾಹಿತಿ ಆದೇಶದ ನಂತರ ಸಿಗಲಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ 12ರಿಂದ 18 ವರ್ಷದವರಿಗೆ ಮೊದಲ ಆಯ್ಕೆಯಾಗಿರುತ್ತದೆ. ಶಾಲೆಗಳಲ್ಲಿ ವ್ಯಾಕ್ಸಿನ್ ಕೊಡಬೇಕೇ ಅಥವಾ ಬೇರೆ ಕಡೆ ಕೊಡಬೇಕೇ ಎಂಬ ಬಗ್ಗೆ ಚರ್ಚೆಯಾಗಲಿದೆ. ನಂತರ ಎಲ್ಲರಿಗೂ ಲಸಿಕೆ ತಲುಪಲಿದೆಯೇ ಎಂಬ ಬಗ್ಗೆ ಸರ್ವೆ ಆಗಬೇಕು ಎಂದರು.
ಲಸಿಕೆ ಬಂದರೆ ಮೊದಲು ರಾಜ್ಯ ಸರ್ಕಾರಕ್ಕೆ ಬರುತ್ತದೆ. ನಂತರ ಆರೋಗ್ಯ ಇಲಾಖೆ ಮೂಲಕ ಪಾಲಿಕೆಗೆ ಬರುತ್ತದೆ. ಆನಂತರ ಕೋಲ್ಡ್ ಪಾಯಿಂಟ್ಗೆ ಬಂದು ನಂತರ ವಿತರಣೆಯಾಗಲಿದೆ ಎಂದು ತಿಳಿಸಿದರು.
ವ್ಯಾಕ್ಸಿನ್ ತೆಗೆದುಕೊಂಡರೂ ಸೋಂಕು ನಿಂತಿಲ್ಲ. ಸೋಂಕು ಬಂದರೂ ಭೀಕರತೆ ಯಾರಿಗೂ ಕಾಡಿಲ್ಲ. ಐಸಿಯು ಪ್ರಮಾಣ ಶೂನ್ಯವಾಗಲಿದೆ. ಎರಡು ಡೋಸ್ ಪಡೆದಾಗ ಯಾವುದೇ ಅಪಾಯಕಾರಿ ಪರಿಣಾಮವಾಗಲ್ಲ ಎಂದು ಗೌರವ್ಗುಪ್ತ ಹೇಳಿದರು.
# ಪ್ರತ್ಯೇಕ ಮಾರ್ಗಸೂಚಿ:
ದಸರಾ ಹಬ್ಬಕ್ಕೆ ಸಂಬಂಸಿದಂತೆ ನಗರದಲ್ಲಿ ದುರ್ಗಾದೇವಿ ಪ್ರತಿಷ್ಠಾಪನೆಗೆ ಪ್ರತ್ಯೇಕ ಮಾರ್ಗಸೂಚಿ ಮಾಡಲಿದ್ದೇವೆ. ಪೆÇಲೀಸ್ ಇಲಾಖೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಗೆ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲು ಕಸರತ್ತು ಮಾಡುತ್ತಿರುವ ಸಂಸದ ಶಿವಕುಮಾರ್ ಉದಾಸಿ