Publish Date: Thu, 03 Nov 2022 (14:20 IST)
Updated Date: Thu, 03 Nov 2022 (17:23 IST)
ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮೆಗಾ ಟೂರ್ ಮಾಡಲು ಪಾಲಿಕೆ ಅಧಿಕಾರಿಗಳು, ನೌಕರರು ಸಜ್ಜಾಗುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕಾಶಿ ಯಾತ್ರೆಗೆ ಸಾವಿರಾರು ಸಿಬ್ಬಂದಿ ಸಾಕ್ಷಿಯಾಗಲಿದ್ದಾರೆ.
ಆಧ್ಯಾತ್ಮ ವರ್ಸಸ್ ಕನ್ನಡ ಪ್ರೇಮ ತೋರಲು ಮೆಗಾ ಟ್ರಿಪ್ಗೆ ಸಿದ್ಧತೆ ನಡೆಯುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾಶಿಯಲ್ಲಿ ಕಾಶಿ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ.
ಇದಕ್ಕಾಗಿ ಬರೋಬ್ಬರಿ 1,300 ಜನರು ಬೆಂಗಳೂರಿಂದ ಕಾಶಿ ಟ್ರಿಪ್ ಮಾಡುತ್ತಿದ್ದಾರೆ. ಇದೇ ತಿಂಗಳ 11, 12 ಹಾಗೂ 13 ರಂದು ಕಾಶಿ ಉತ್ಸವ ನಡೆಸಲು ತೀರ್ಮಾನವಾಗಿದೆ. ಈ ಪ್ರಕಾರ ಬೆಂಗಳೂರು ರೈಲ್ವೆ ಮೂಲಕ ಬರೋಬ್ಬರಿ 800 ಜನ ನೌಕರರು ಸೇರಿದಂತೆ ಹಲವು ಕುಟುಂಬ ಸದಸ್ಯರು ಪ್ರಯಾಣ ಬೆಳೆಸಲಿದ್ದಾರೆ.