Select Your Language

Notifications

webdunia
webdunia
webdunia
webdunia

ಸೆಮಿಫೈನಲ್ಗೆ ಲಗ್ಗೆ ಇಟ್ಟ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ಸೆಮಿಫೈನಲ್ಗೆ ಲಗ್ಗೆ ಇಟ್ಟ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು
ನವದೆಹಲಿ , ಶುಕ್ರವಾರ, 30 ಜುಲೈ 2021 (18:47 IST)
ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದು ಈ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಆಸೆ ಮೂಡಿದೆ ಎಂದು ಹೇಳಿದರೆ ತಪ್ಪಿಲ್ಲ. ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ಅವರು ಜಪಾನ್ನ ಮೂರನೇ ಶ್ರೇಯಾಂಕದ ಅಕಾನೆ ಯಮಗುಚಿ ಅವರನ್ನು 2-0 ನೇರ ಸೆಟ್ಗಳಿಂದ ಸೋಲಿಸಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಹೀಗೆ ಸಿಂಧು ಅವರು ರೋಚಕ ಗೆಲುವಿನ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

ಕೇವಲ 23 ನಿಮಿಷಗಳಲ್ಲಿ ಮೊದಲ ಸೆಟ್ ಅನ್ನು 21-13 ಅಂತರದಲ್ಲಿ ಸಿಂಧು ವಶಪಡಿಸಿಕೊಂಡಿದ್ದು, ಎರಡನೇ ಸೆಟ್ನಲ್ಲಿ ಮೊದಲಿಗೆ ಸಿಂಧು ಅವರು 11-6 ರಿಂದ ಮುಂದಿದ್ದರು. ಈ ಸಮಯದಲ್ಲಿ ಯಮಗುಚಿ ತೀವ್ರ ಪೈಪೋಟಿಯನ್ನು ಒಡ್ಡಿದರು ಕೊನೆಗೆ 20-20ರಲ್ಲಿ ಸೆಟ್ ಸಮಬಲವಾಗಿತ್ತು. ಮತ್ತೆ ಆಟದಲ್ಲಿ ಲಯ ಕಂಡುಕೊಂಡ ಸಿಂಧು ಎರಡನೇ ಸೆಟ್ ಅನ್ನು 22-20 ರಿಂದ ಕಠಿಣ ಸ್ಪರ್ಧೆಯನ್ನೊಡ್ಡಿ ಗೆಜಜಿಜu,  ಸೆಮಿಫೈನಲ್ಗೆ ಪಾದಾರ್ಪಣೆ ಮಾಡಿದ್ದಾರೆ.
ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಸಿಂಧು ಮೊದಲ ಸೆಟ್ ಅನ್ನು ಸುಲಭದಲ್ಲಿ ಜಯಿಸಿದರು. ಎರಡನೇ ಸೆಟ್ನಲ್ಲಿ ಅಕಾನೆ ಕಠಿಣ ಸ್ಪರ್ಧೆಯನ್ನೊಡ್ಡಿದ್ದರು. ರೋಮಾಂಚನಕಾರಿಯಾಗಿ ನಡೆದ ಸ್ಪರ್ಧೆಯಲ್ಲಿ ಸಿಂಧು ಎರಡನೇ ಸೆಟ್ ಅನ್ನು ಕೂಡ ಗೆದ್ದು ವಿಜಯದ ನಗೆ ಬೀರಿದರು.
ಐದನೇ ಶ್ರೇಯಾಂಕದ ಸಿಂಧು ಆರಂಭಿಕ ಪಂದ್ಯವನ್ನು ಕಳೆದುಕೊಂಡರೂ ನಿರಾಶೆಗೊಳ್ಳಲಿಲ್ಲ. ಗಮನಾರ್ಹ ಪುನರಾರಂಭವನ್ನು ಪಡೆದುಕೊಂಡು ಬರೇ 16 ನಿಮಿಷದಲ್ಲಿ ಯಮಗುಚಿ ಅವರನ್ನು ಸೋಲಿಸಿ ವಿಜಯ ಮಾಲೆಯನ್ನು ಧರಿಸಿದರು. ಕಳೆದ ಮೂರು ಟೂರ್ನಿಗಳಲ್ಲಿ ಯಮಗುಚಿ ಎದುರು ಸೋತರೂ ಕೂಡ ಭಾರತೀಯ ಆಟಗಾರ್ತಿ ಪಿ.ವಿ ಸಿಂಧು ಇದೇ ಮೊದಲ ಬಾರಿಗೆ ಜಪಾನ್ನ ಆಟಗಾರ್ತಿಯ ವಿರುದ್ಧ ಜಯ ಸಾಧಿಸಿದ್ದಾರೆ.
ಯಮಗುಚಿ ಅವರು ರಿಯೊ ಒಲಿಂಪಿಕ್ಸ್ನಲ್ಲೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಸಿಂಧು ಹಾಗೂ ಯಮಗುಚಿ ನಡುವೆ ಒಟ್ಟು ಹದಿನೆಂಟು ಪಂದ್ಯಗಳು ನಡೆದಿದ್ದು ಅದರಲ್ಲಿ ಸಿಂಧು 11 ರಲ್ಲಿ ಹಾಗೂ ಯಮಗುಚಿ 7 ರಲ್ಲಿ ಜಯ ಸಾಧಿಸಿದ್ದಾರೆ. ಯಮಗುಚಿಯವರನ್ನು ಸೋಲಿಸಿದ ನಂತರ ಸಿಂಧು ಅವರ ಗೆಲುವಿನ ಸಂಖ್ಯೆ 12 ಕ್ಕೆ ಏರಿದೆ.
ಪಂದ್ಯವನ್ನು ಆರಂಭದಲ್ಲಿ ಉತ್ತಮವಾಗಿ ಆರಂಭಿಸಿದರೂ 15-16 ರಲ್ಲಿ ಒಂದೆರಡು ಅಂಕಗಳನ್ನು ಎದುರಾಳಿಗೆ ನೀಡಿರುವೆ. ಈ ಸಮಯದಲ್ಲಿ ನಾನು ಪಂದ್ಯವನ್ನು ಅರಿತುಕೊಳ್ಳಲು ಬೇಕಾದ ತಂತ್ರಗಳನ್ನು ಮಾಡುತ್ತಿದ್ದೆ. ನಾನು ತಪ್ಪಾದ ವಿಧಾನದಲ್ಲಿ ಆಟವಾಡುತ್ತಿದ್ದೇನೆ ಎಂಬುದಾಗಿ ನನ್ನ ಕೋಚ್ ತಿಳಿಸಿದ ಒಡನೆಯೇ ತಪ್ಪನ್ನು ಅರಿತುಕೊಂಡೆ ಹಾಗೂ ಆಟದ ತಂತ್ರವನ್ನೇ ಬದಲಿಸಿಕೊಂಡು ಮೊದಲ ಪಂದ್ಯವನ್ನು ಪೂರ್ಣಗೊಳಿಸಿದೆ ಎಂದು ಸಿಂಧು ಮಾಧ್ಯಮಕ್ಕೆ ತಿಳಿಸಿದ್ದಾರೆ.ಮಹಿಳೆಯರ 69 ಕೆಜಿ ಬಾಕ್ಸಿಂಗ್ ಸ್ಪರ್ಧೆಯ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಈ ಹಿಂದಿನ ವಿಶ್ವಚಾಂಪಿಯನ್ ತೈಪೆಯ ಚೆನ್ ನಿಯೆನ್ ಚೆನ್ ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ ಮೊತ್ತೊಂದು ಪದಕವನ್ನು ಖಚಿತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆ. 2 ರಿಂದ ಪ್ರೈವೆಟ್ ಸ್ಕೂಲ್ ಓಪನ್?