Select Your Language

Notifications

webdunia
webdunia
webdunia
webdunia

ಪಿ.ವಿ. ಸಿಂಧು ಮೇಲೆ ಇಂದು ಎಲ್ಲರ ಕಣ್ಣು

ಪಿ.ವಿ. ಸಿಂಧು ಮೇಲೆ ಇಂದು ಎಲ್ಲರ ಕಣ್ಣು
ಟೋಕಿಯೋ , ಶುಕ್ರವಾರ, 30 ಜುಲೈ 2021 (09:22 IST)
ಟೋಕಿಯೋ: ಬ್ಯಾಡ್ಮಿಟಂನ್ ನ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಇಂದು ಭಾರತದ ಭರವಸೆಯ ತಾರೆ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್ ಪಂದ್ಯವಾಡುತ್ತಿದ್ದಾರೆ.


ಸಿಂಧು ಪದಕ ಗೆಲ್ಲುತ್ತಾರೆಂಬ ನಿರೀಕ್ಷೆ ದೇಶದ ಜನರಲ್ಲಿದೆ. ಇದರ ನಡುವೆ ಇಂದು ಅವರು ಮಹತ್ವದ ಪಂದ್ಯಕ್ಕೆ ಸಿದ್ಧವಾಗಿದ್ದಾರೆ.

ಇಂದಿನ ಪಂದ್ಯದಲ್ಲಿ ಸಿಂಧು ಜಪಾನ್ ನ ಯಮಗುಚಿ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯ ಮಧ‍್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ಪಂದ್ಯ ಈ ಮೊದಲಿನಷ್ಟು ಸುಲಭವಲ್ಲ. ಯಾಕೆಂದರೆ ಸಿಂಧು ಇದುವರೆಗೆ ತನಗಿಂತ ಕೆಳ ಶ್ರೇಯಾಂಕಿತರೊಂದಿಗೇ ಆಡಿ ಗೆದ್ದಿದ್ದರು. ಈ ಪಂದ್ಯದಲ್ಲಿ ವಿಶ್ವ ನಂ.5 ನೇ ಆಟಗಾರ್ತಿಯೊಂದಿಗೆ ಆಡಲಿದ್ದಾರೆ. ಸದ್ಯಕ್ಕೆ ಸಿಂಧು ವಿಶ್ವ ನಂ. 7 ನೇ ಶ್ರೇಯಾಂಕಿತರಾಗಿದ್ದು, ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ಎದುರಿಸಲಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕಿದ ಬಾಕ್ಸರ್ ಮೇರಿ ಕೋಮ್