Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮೇಲೊಬ್ಬ ಮಾಯಾವಿ ಚಿತ್ರತಂಡದಿಂದ ಅರ್ಥಗರ್ಭಿತ ಟೈಟಲ್

webdunia
ಗುರುವಾರ, 29 ಜುಲೈ 2021 (21:15 IST)
ಇತ್ತೀಚೆಗೆ  ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮೇಲೊಬ್ಬ ಮಾಯಾವಿ ಚಿತ್ರತಂಡ ಕಂಟೆಂಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಹರಳು ಮಾಫಿಯಾದ (gem mafia) ಕಂಟೆಂಟ್ ಅನ್ನು ಹೊತ್ತಿದ್ದ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿತ್ತು.
ಈಗ ಚಿತ್ರ ತಂಡ ಚಿತ್ರದ ಟೈಟಲ್ ವಿಡಿಯೋ ಸಾಂಗ್ ಅನ್ನು ಬಿಡಿಗಡೆಗೊಳಿಸಿದೆ. ಬಿಗ್ ಬಾಸ್ ಖ್ಯಾತಿಯ,  ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ಇರುವ ಈ ಹಾಡನ್ನು ಎಲ್.ಎನ್.ಶಾಸ್ತ್ರೀ, ಹೇಮಂತ್ ಮತ್ತು ಶಮಿತಾ ಮಲ್ನಾಡ್ ಹಾಡಿದ್ದಾರೆ. 
ಎಲ್.ಎನ್.ಶಾಸ್ತ್ರೀಯವರು ತಮ್ಮ ಕೊನೆಯ ದಿನಗಳಲ್ಲಿ ಹಾಡಿದ ಈ ಹಾಡು ಸಾಕಷ್ಟು ಅರ್ಥಗರ್ಭಿತವಾಗಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ.
 
ಕರಾವಳಿಯಲ್ಲಿ ನಡೆದ ಸತ್ಯ ಕಥೆ ಆಧಾರಿತ  ಈ ಚಿತ್ರವನ್ನು  ಬಿ.ನವೀನ್ ಕೃಷ್ಣ ಕಥೆ,  ಬರೆದು ನಿರ್ದೇಶಿಸಿದ್ದಾರೆ.  ಶ್ರೀ ಕಟೀಲ್ ಸಿನಿಮಾಸ್  ಲಾಂಛನದಲ್ಲಿ ಭರತ್  ಹಾಗೂ ತನ್ವಿ ಅಮಿನ್ ಕೊಲ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
 
ಚಿತ್ರಕ್ಕೆ ಎಲ್‌.ಎನ್. ಶಾಸ್ತ್ರಿ ಸಂಗೀತ  ನೀಡಿದ್ದು, ಚಕ್ರವರ್ತಿ ಚಂದ್ರಚೂಡ್ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯ ರಚಿಸಿದ್ದಾರೆ.  ಕೆ.ಗಿರೀಶ್‌ ಕುಮಾರ್‌ ಸಂಕಲನಕಾರರಾಗಿರುವ ʻಮೇಲೊಬ್ಬ ಮಾಯಾವಿʼಗೆ, ದೀಪಿತ್‌ ಬಿಜೈ  ರತ್ನಾಕರ್‌ ಛಾಯಾಗ್ರಹಣ ಮಾಡಿದ್ದಾರೆ. ದೇಸಿ ಸೊಗಡಿನ ಈ ಹಾಡಿಗೆ ರಾಮು ಅವರ ನೃತ್ಯ ನಿರ್ದೇಶನವಿದೆ. ಮಣಿಕಾಂತ್‌ ಕದ್ರಿ  ಹಿನ್ನಲೆ ಸಂಗೀತ ನೀಡಿರುವ  ಈ ಚಿತ್ರದಲ್ಲಿ  ಸಂಚಾರಿ ವಿಜಯ್‌, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್‌, ಕೃಷ್ಣಮೂರ್ತಿ ಕವತ್ತಾರ್‌, ಎಮ್‌.ಕೆ.ಮಠ, ಬೆನಕ ನಂಜಪ್ಪ, ಮಾಸ್ಟರ್‌ ಲಕ್ಷ್ಮೀ ಅರ್ಪಣ್‌, ನವೀನ್‌ಕುಮಾರ್‌, ಪವಿತ್ರಾ ಜಯರಾಮ್‌, ಮುಖೇಶ್‌, ಡಾ||ಮನೋನ್ಮಣಿ,  ಸೇರಿದಂತೆ ಸಾಕಷ್ಟು ರಂಗಭೂಮಿ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ "ಮೇಲೊಬ್ಬ ಮಾಯಾವಿ"ಚಿತ್ರ ತೆರೆಗೆ ಬರಲಿದೆ. 
 
melobbamayavi tittle track #FullvedioSong Released   @ Ashwini Audio 
 
Music : L.N.Shastry 
Lyricist : Chakravarthy Chandrachood
Singers : L.N.Shastry, Hemanth & Shamitha Malnad
Choreography : Ramu Master
Starring : Sanchari Vijay, Ananya Shetty & Chakravarthy Chandrachood
Produced by : Bharath & Thanvi Amin kolya
Story& Direction : B.Naveen Krishna
Editor : K.Girish Kumar
DOP : Deepith Bejai Rathnakar
B.G.M: Manikanth Ka
meloba mayavi
dri
P.R.O : Sudheendra Venkatesh
Publicity Design : Avis

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಒಳಗಿಂದ ಫೀಲ್ ಮಾಡಿದಾಗಲೇ ಹೊಸಲೋಕ – ಕ್ರೇಜಿಸ್ಟಾರ್