Publish Date: Sat, 19 Jun 2021 (10:34 IST)
Updated Date: Sat, 19 Jun 2021 (10:37 IST)
ಬೆಂಗಳೂರು: ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ನಿಧನರಾದ ಪ್ರತಿಭಾವಂತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಬಗ್ಗೆ ನಟ ಅನಿರುದ್ಧ್ ಮಾತನಾಡಿದ್ದಾರೆ.
ವಿಜಯ್ ಅಕಾಲಿಕ ಸಾವಿಗೆ ದುಃಖ ವ್ಯಕ್ತಪಡಿಸಿರುವ ಅನಿರುದ್ಧ್ ದ್ವಿಚಕ್ರ ವಾಹನ ಬಳಸುವಾಗ ಹೆಲ್ಮೆಟ್ ಬಳಸುವುದನ್ನು ಮರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಸಂಚಾರಿ ವಿಜಯ್ ಪ್ರತಿಭಾವಂತರಾದರೂ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಕ್ಕಾಗಿ ಪರದಾಡಿದ್ದರ ಬಗ್ಗೆ ಮಾತನಾಡಿದ್ದಾರೆ.
ನಾನೂ ಕೂಡಾ ಚಿತ್ರರಂಗದಲ್ಲಿ ಇಂತಹ ಅವಮಾನ ಎದುರಿಸಿದ್ದೇನೆ. ನಿಮ್ಮಲ್ಲಿ ಪ್ರತಿಭೆಯಿದೆ, ಆದರೆ ಮಾರುಕಟ್ಟೆಯಲ್ಲಿ ನಿಮ್ಮನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ದುಡ್ಡು ಬರಲ್ಲ ಎಂದು ಎಷ್ಟೋ ಜನ ಅವಕಾಶ ನೀಡಿಲ್ಲ. ವಿಜಯ್ ಎದುರಿಸಿದ ಪರಿಸ್ಥಿತಿಯನ್ನೇ ನಾನೂ ಎದುರಿಸಿದ್ದೇನೆ. ಈ ನಿಟ್ಟಿನಲ್ಲಿ ನಾವು ಬೇರೆ ಚಿತ್ರರಂಗವನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಪ್ರತಿಭೆಗೆ ಅವಕಾಶ ನೀಡುವುದನ್ನು ಕಲಿಯಬೇಕು, ರೂಪಕ್ಕಲ್ಲ ಎಂದು ಅವರು ನೋವು ಹಂಚಿಕೊಂಡಿದ್ದಾರೆ.