Select Your Language

Notifications

webdunia
webdunia
webdunia
webdunia

ಗೆಳೆಯನ ಸಾವಿನ ದುಃಖ: ಬರ್ತ್ ಡೇ ಆಚರಿಸಲ್ಲ ಎಂದ ನೀನಾಸಂ ಸತೀಶ್

ಗೆಳೆಯನ ಸಾವಿನ ದುಃಖ: ಬರ್ತ್ ಡೇ ಆಚರಿಸಲ್ಲ ಎಂದ ನೀನಾಸಂ ಸತೀಶ್
ಬೆಂಗಳೂರು , ಶನಿವಾರ, 19 ಜೂನ್ 2021 (10:17 IST)
ಬೆಂಗಳೂರು: ಗೆಳೆಯ ಸಂಚಾರಿ ವಿಜಯ್ ಅಕಾಲಿಕ ಸಾವಿನ ದುಃಖದಲ್ಲಿರುವ ನಟ ನೀನಾಸಂ ಸತೀಶ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ತೀರ್ಮಾನಿಸಿದ್ದಾರೆ.


ನಾಳೆ ನೀನಾಸಂ ಸತೀಶ್ ಹುಟ್ಟುಹಬ್ಬ. ಆದರೆ ಪ್ರತೀ ಬಾರಿಯಂತೆ ಈ ಬಾರಿ ಯಾವುದೇ ಆಚರಣೆ ಮಾಡದೇ ಇರಲು ಅವರು ತೀರ್ಮಾನಿಸಿದ್ದಾರೆ.

‘ಗೆಳೆಯರೇ ಇದೇ 20 ನನ್ನ ಹುಟ್ಟುಹಬ್ಬ, ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರುವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡಾ ಮುಂದೂಡಿದ್ದೇವೆ. ಥ್ಯಾಂಕ್ಯೂ’ ಎಂದು ಸತೀಶ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿಚಾರಣೆಗೆ ಹಾಜರಾಗಲು ನಟ ಚೇತನ್ ಗೆ ನೋಟಿಸ್