Publish Date: Fri, 30 Jul 2021 (11:16 IST)
Updated Date: Fri, 30 Jul 2021 (11:19 IST)
ಟೋಕಿಯೋ: 100 ಮೀ. ಓಟ ಸ್ಪರ್ಧೆಯಲ್ಲಿ ಭಾರತದ ಧ್ಯುತಿ ಚಾಂದ್ ಏಳನೆಯವರಾಗಿ ಓಟ ಪೂರ್ತಿ ಮಾಡಿದ್ದು, ಸೆಮಿಫೈನಲ್ ಹಾದಿಯಲ್ಲಿ ಮುಗ್ಗರಿಸಿದ್ದಾರೆ.
ಒಟ್ಟು ಎಂಟು ಸ್ಪರ್ಧಿಗಳ ಪೈಕಿ ದ್ಯುತಿ ಏಳನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 100 ಮೀ. ದೂರ ಕ್ರಮಿಸಲು ಅವರು 11.54 ಸೆಕೆಂಡುಗಳನ್ನು ತೆಗೆದುಕೊಂಡರು. ಹೀಗಾಗಿ ಸೆಮಿಫೈನಲ್ ಅವಕಾಶ ಕಳೆದುಕೊಳ್ಳಬೇಕಾಯಿತು.
ಇನ್ನು ಮಹಿಳೆಯರ 25 ಎಂ. ಪಿಸ್ತೂಲ್ ಕ್ವಾಲಿಫಿಕೇಷನ್ ರ್ಯಾಪಿಡ್ ರೌಂಡ್ ನಲ್ಲಿ ಭಾರತದ ಮನು ಬಾಕರ್ 15 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನೀಗ ಇಂದು ನಡೆಯಲಿರುವ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯ (ಪಿ.ವಿ. ಸಿಂಧು) ಮತ್ತು ಆರ್ಚರಿಯಲ್ಲಿ ದೀಪಿಕಾ ಕುಮಾರಿ ಪಂದ್ಯದ ಮೇಲೆ ಎಲ್ಲರ ದೃಷ್ಟಿಯಿದೆ.