ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಮಹಿಳೆಯರ ಬಾಕ್ಸಿಂಗ್ ನಲ್ಲಿ ಭಾರತದ ಲೊವ್ಲಿನಾ ಬರ್ಗೊಹಿನ್ ಸೆಮಿಫೈನಲ್ ತಲುಪಿದ್ದಾರೆ.
ಈ ಮೂಲಕ ಕನಿಷ್ಠ ಕಂಚಿನ ಪದಕ ಗ್ಯಾರಂಟಿಯಾಗಿದೆ. ಈ ಮೂಲಕ ವಿಜೇಂದರ್ ಸಿಂಗ್ ಹಾಗೂ ಮೇರಿ ಕೋಮ್ ಬಳಿಕ ಬಾಕ್ಸಿಂಗ್ ನಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಮೂರನೇ ಭಾರತೀಯರೆನಿಸಿಕೊಳ್ಳಲಿದ್ದಾರೆ.
ಒಂದು ವೇಳೆ ಸೆಮಿಫೈನಲ್ ನಲ್ಲಿ ಗೆದ್ದರೆ ಬೆಳ್ಳಿ ಪದಕ ಖಚಿತವಾಗಲಿದೆ. ಕ್ವಾರ್ಟರ್ ಫೈನಲ್ ನಲ್ಲಿ ಚೈನೀಸ್ ತೈಪೆಯ ಮಾಜಿ ವಿಶ್ವ ಚಾಂಪಿಯನ್ ಚೆನ್ ನೀನ್ ಚಿನ್ ರನ್ನು ಸೋಲಿಸಿ ಲೊವ್ಲಿನಾ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ಅಸ್ಸಾಂ ಮೂಲದ 23 ವರ್ಷದ ಬಾಕ್ಸರ್ ಇದೀಗ ಚಿನ್ನ ಗೆಲ್ಲುವುದೇ ನನ್ನ ಗುರಿ ಎಂದಿದ್ದಾರೆ.